ಬೆಂಗಳೂರು : ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಈ ವರ್ಷದ ಜನವರಿಯಲ್ಲಿ ಒಟ್ಟು 4,894 ಮೆಟ್ರಿಕ್ ಟನ್ ಸೋಪ್ ಉತ್ಪನ್ನ ಉತ್ಪಾದನೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹೆಚ್ಚುವರಿ ಸಿಬ್ಬಂದಿಯ ನೇಮಕವಾಗಲಿ ಅಥವಾ ಹೊಸ ಯಂತ್ರೋಪಕರಣಗಳ ಖರೀದಿಯಾಗಲಿ ಮಾಡದೆ, ಹಾಲಿ ಇರುವ ವ್ಯವಸ್ಥೆಯಿಂದಲೇ ಇಷ್ಟು ದಾಖಲೆ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಇದಕ್ಮೆ ಶ್ರಮಿಸಿದ ಎಲ್ಲ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ತಿಳಿಸಿದ್ದಾರೆ.ಅವರು, ಜನವರಿ ತಿಂಗಳಲ್ಲಿ ಸಾಬೂನು ವಿಭಾಗದಲ್ಲಿ 3,798 ಟನ್, ಮಾರ್ಜಕಗಳ ವಿಭಾಗದಲ್ಲಿ 941 ಟನ್ ಮತ್ತು ಕಾಸ್ಮೆಟಿಕ್ಸ್ ವಿಭಾಗದಲ್ಲಿ 155 ಟನ್ ಉತ್ಪಾದನೆ ನಡೆದಿದೆ ಎಂದು ಹೇಳಿದ್ದಾರೆ.
ಕೆಎಸ್‌ಡಿಎಲ್ ಈ ಹಿಂದೆ 2020ರ ಸೆಪ್ಟೆಂಬರ್‌ನಲ್ಲಿ 3,113 ಟನ್, 2021ರ ನವೆಂಬರ್‌ನಲ್ಲಿ 2,744 ಟನ್, 2022ರ ಸೆಪ್ಟೆಂಬರ್‌ನಲ್ಲಿ 3,650 ಟನ್, 2023ರ ನವೆಂಬರ್‌ನಲ್ಲಿ 4,144 ಟನ್, 2025ರ ಮಾರ್ಚ್‌ನಲ್ಲಿ 4,486 ಟನ್, 2025ರ ಡಿಸೆಂಬರ್‌ನಲ್ಲಿ 4,735 ಟನ್ ಉತ್ಪಾದನೆ ಮೂಲಕ ದಾಖಲೆ ನಿರ್ಮಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಉತ್ತರ ಭಾರತ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಮಾರುಕಟ್ಟೆ ವಿಸ್ತರಣೆ, ಬ್ರ್ಯಾಂಡ್ ಬಲಪಡಿಕೆ ಮತ್ತು ಮೂರು ಶಿಫ್ಟ್‌ಗಳಲ್ಲಿ ನಿರಂತರ, ಗುಣಮಟ್ಟ ಆಧಾರಿತ ಉತ್ಪಾದನಾ ವ್ಯವಸ್ಥೆ ಜಾರಿಗೆ ತಂದಿರುವುದೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ ಕೆಎಸ್‌ಡಿಎಲ್ 45ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಲಾಗಿದೆ. ಸಂಸ್ಥೆಯ ಟರ್ನ್‌ಓವರ್ ಅನ್ನು 2030ರೊಳಗೆ ₹5,000 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
ಹೆಚ್ಚುವರಿ ಸಿಬ್ಬಂದಿಯ ನೇಮಕವಾಗಲಿ ಅಥವಾ ಹೊಸ ಯಂತ್ರೋಪಕರಣಗಳ ಖರೀದಿಯಾಗಲಿ ಮಾಡದೆ, ಹಾಲಿ ಇರುವ ವ್ಯವಸ್ಥೆಯಿಂದಲೇ ಇಷ್ಟು ದಾಖಲೆ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಇದಕ್ಮೆ ಶ್ರಮಿಸಿದ ಎಲ್ಲ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದು ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ತಿಳಿಸಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಗೆಲ್ಲಲು ಸೂರ್ಯಕುಮಾರ್ ಪಡೆ ಸಜ್ಜು | ಎಂ.ಎಸ್. ಧೋನಿ ವಿಶ್ವಾಸ



















