ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) ಸಲಹೆಗಾರರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಒಪ್ಪಂದದ ಆಧಾರದ ಮೇಲೆ ರಾಜಸ್ವ ವಿಷಯಗಳ ಸಲಹೆಗಾರರ ಹುದ್ದೆಗಳಿಗೆ (Adviser on Revenue Matters) ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 27ರಂದು ನೇರ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ಹಾಜರಾಗುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ನೌಕರಿಯಿಂದ ನಿವೃತ್ತರಾಗಿರಬೇಕು ಹಾಗೂ ಸಹಾಯಕ ಆಯುಕ್ತ (Assistant Commissioner) ಅಥವಾ ಅದಕ್ಕಿಂತ ಮೇಲಿನ ಹುದ್ದೆಯಲ್ಲಿ ಸೇವೆ ಸಲ್ಲಿಸಿರಬೇಕು ಎಂಬ ನಿಯಮವಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು kptcl.karnataka.gov.in ಗೆ ಭೇಟಿ ನೀಡಬಹುದಾಗಿದೆ.
ನೇಮಕಾತಿ ಬಳಿಕ ಸಲಹೆಗಾರಿಗೆ ರಾಜಸ್ವ ಇಲಾಖೆ, ಬಿಡಿಎ, ಕೆಐಎಡಿಬಿ, ಕೆಎಚ್ ಬಿ, ಬಿಡಬ್ಲ್ಯೂಎಸ್ ಎಸ್ ಬಿ ಮತ್ತು ಇತರೆ ಸಂಸ್ಥೆಗಳೊಂದಿಗೆ ಸಹಕಾರ ಮತ್ತು ಸಮನ್ವಯ ಸಾಧಿಸಿ, ಕೆಪಿಟಿಸಿಎಲ್ ಹಕ್ಕಿನಲ್ಲಿರುವ ಆಸ್ತಿ ದಾಖಲೆಗಳನ್ನು ನವೀಕರಿಸುವ ಜವಾಬ್ದಾರಿ ನೀಡಲಾಗುತ್ತದೆ.
ಯಾವ ದಾಖಲೆ ತರಬೇಕು?
- ಆಧಾರ್ ಕಾರ್ಡ್
- ನಿವೃತ್ತಿ ಪ್ರಮಾಣ ಪತ್ರ ಸೇರಿ ಹಲವು ದಾಖಲೆ
- ಬಯೋಡೇಟಾ
ಸಂದರ್ಶನದ ಸ್ಥಳ, ದಿನಾಂಕದ ಮಾಹಿತಿ
ಸಂದರ್ಶನ ದಿನಾಂಕ: 27/03/2025
ಸಂದರ್ಶನ ಸ್ಥಳ: ನಿಗಮದ ಕಚೇರಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕಾವೇರಿ ಭವನ, ಬೆಂಗಳೂರು-560009
ಸಂದರ್ಶನ ಸಮಯ: ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ