ಕೊಪ್ಪಳ : ಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿರುವ ಹಿನ್ನಲೆ ಕೊಪ್ಪಳ ಮಾಜಿ ನಗರಸಭೆ ಸದಸ್ಯೆಯನ್ನು ಬೆಂಗಳೂರು ಸಿಸಿಬಿ ಪೊಲೀಸಿದ್ದಾರೆ.
ವಿಜಯಾ ಹಿರೇಮಠ ಬಂಧಿತ ಆರೋಪಿ. ಕಲ್ಯಾಣ ಕರ್ನಾಟಕ ಭಾಗದ ಜನರಿಂದ ಸುಮಾರು 90 ಲಕ್ಷ ಹಣ ಪಡೆದು ವಂಚನೆಗೈದಿದ್ದಾರೆ. ಕೋರ್ಟ್ ನಲ್ಲಿ ಖಾಲಿ ಇರುವ FDC ಹಾಗೂ ಪ್ಯೂನ್ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದರು.
ಸಿದ್ದಲಿಂಗಯ್ಯ ಹಿರೇಮಠ ಹಾಗೂ ವಿಜಯ ಹಿರೇಮಠ ಸೇರಿ ಆರು ಜನರ ವಿರುದ್ದ ದೂರು ದಾಖಲಾಗಿದ್ದು, ಸದ್ಯ ಜಾಮೀನಿನ ಮೇಲೆ ಸಿದ್ದಲಿಂಗಯ್ಯ ಹಿರೇಮಠ ಹೋರ ಬಂದದಿದ್ದಾರೆ, ಇಂದು ರಾಮದುರ್ಗದಲ್ಲಿ ವಿಜಯಾ ಹಿರೇಮಠ ಅವರನ್ನು ಬಂಧಿಸಲಾಗಿದೆ.