ಬೆಂಗಳೂರು: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL)ನಲ್ಲಿ ಖಾಲಿ ಇರುವ ಟೆಕ್ನಿಶಿಯನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿಒಟ್ಟು 50 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಅಭ್ಯರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ
ಸಂಸ್ಥೆ ಹೆಸರು : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್
ಒಟ್ಟು ಹುದ್ದೆಗಳ ಸಂಖ್ಯೆ: 50
ಉದ್ಯೋಗ ಸ್ಥಳ: ವಡೋದರಾ, ಗುಜರಾತ್
ಹುದ್ದೆಗಳ ಹೆಸರು: ತಂತ್ರಜ್ಞರು
ಸಂಬಳ: ತಿಂಗಳಿಗೆ ರೂ.35,500-40,500 ರೂಪಾಯಿ
25 ತಂತ್ರಜ್ಞರು (ವೆಲ್ಡರ್) ಮತ್ತು 25 ತಂತ್ರಜ್ಞರು (ಫಿಟ್ಟರ್) ಹುದ್ದೆಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ವಾಕ್-ಇನ್ ಸಂದರ್ಶನವನ್ನು ಏರ್ಪಡಿಸಲಾಗಿದೆ. ಜುಲೈ 14ರಂದು ಬೆಳಗ್ಗೆ 10:30ಕ್ಕೆ ಎಕ್ಸಿಕ್ಯುಟಿವ್ ಕ್ಲಬ್, ಕೊಂಕಣ ರೈಲ್ ವಿಹಾರ್, ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್, ಸೀವುಡ್ಸ್ ರೈಲ್ವೆ ನಿಲ್ದಾಣದ ಹತ್ತಿರ, ಸೆಕ್ಟರ್ -40, ಸೀವುಡ್ಸ್ (ಪಶ್ಚಿಮ), ನವಿ ಮುಂಬೈನಲ್ಲಿ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ದೇಶದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಐಟಿಐ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ವೆಲ್ಡಿಂಗ್ ಟ್ರೇಡ್, ಫಿಟ್ಟರ್ ಟ್ರೇಡ್ ಕೋರ್ಸ್ ಗಳನ್ನು ಮುಗಿಸಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿಯವರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದೆ.



















