ನವ ದೆಹಲಿ : ಕೊಂಕಣ ರೈಲ್ವೆ ಭಾರತದಲ್ಲಿ ನೂತನ ಅಧ್ಯಾಯ ತೆರೆಯಲು ಮುಂದಾಗಿದ್ದು, ಕೊಂಕಣ ರೈಲ್ವೆ ನಿಗಮ ಮುಂಬೈ ಮತ್ತು ಗೋವಾ ನಡುವೆ ನೂತನ “ರೋ-ರೋ”(ರೋಲ್ ಆನ್,ರೋಲ್ ಆಫ್) ಕಾರು ಸಾಗಾಟ ಸೇವೆಯನ್ನು ಆರಂಭಿಸಿದೆ.
ಇದು ಭಾರತದಲ್ಲಿ ವೈಯಕ್ತಿಕ ಕಾರು ಸಾಗಾಟಕ್ಕಾಗಿ ಪ್ರಾರಂಭಿಸಲಾದ ಮೊದಲ ಪ್ರಾಯೋಗಿಕ ರೈಲು ಸೇವೆಯಾಗಿದೆ.
1999ರಿಂದಲೇ ಸರಕು ಸೇವೆಗಾಗಿ ರೋ-ರೋ ಸೇವೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಕೊಂಕಣ ರೈಲ್ವೆ, ಇದೀಗ ಇದೇ ಸೇವೆಯಲ್ಲಿ ಮುಂದುವರಿದು ವೈಯಕ್ತಿಕ ಕಾರುಗಳ ಸಾಗಣೆಗೂ ವಿಸ್ತರಿಸಿದೆ.

ಕೊಂಕಣ ರೈಲ್ವೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಈ ಸೇವೆ ಆಗಸ್ಟ್ 23ರಂದು ಮಹಾರಾಷ್ಟ್ರದ ಕೋಲಾಡ್ ನಿಂದ ಗೋವಾದ ವರ್ಣಾಕ್ಕೆ ಬರಲಿದೆ. ಆಗಸ್ಟ್ 24ರಂದು ಗೋವಾದ ವರ್ಣಾದಿಂದ ಕೋಲಾಡ್ ಗೆ ಮರಳಲಿದ್ದು, ಸೆಪ್ಟೆಂಬರ್ 11ರವರೆಗೆ ಇದೇ ರೀತಿ ಮುಂದುವರಿಯಲಿದೆ.
ಪ್ರತಿ ಟ್ರಿಪ್ ನಲ್ಲಿ 40 ಕಾರುಗಳನ್ನು ಸಾಗಿಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರತೀ ಕಾರಿಗೆ 7875 ದರವನ್ನು ನಿಗದಿಪಡಿಸಲಾಗಿದೆ. ಇನ್ನು, ಪ್ರತಿ ಕಾರಿಗೆ ಗರಿಷ್ಠ ಮೂರು ವ್ಯಕ್ತಿಗಳು, ಲಗತ್ತಿಸಲಾದ ಎ.ಸಿ ಕೋಚ್ ಅಥವಾ ಸಿಟ್ಟಿಂಗ್ ಕೋಚ್ ನಲ್ಲಿ ಪ್ರಯಾಣ ದರವನ್ನು ಪಾವತಿಸಿ