ನವ ದೆಹಲಿ: ಭಾರತದ ಉಪನಾಯಕ ಶುಭ್ಮನ್ ಗಿಲ್ ಅವರು 2025ರ ಚಾಂಪಿಯನ್ಸ್ ಟ್ರೋಫಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಅತ್ಯಂತ ಅದ್ಭುತ ಇನಿಂಗ್ಸ್ ಆಡಿದ್ದಾರೆ. ಅಜೇಯ ಶತಕ ಬಾರಿಸಿ ಅವರು ಮಿಂಚಿದ್ದಾರೆ.
ಈ ಪ್ರಶಂಸನೀಯ ಬ್ಯಾಟಿಂಗ್‌ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು. ಮಾಜಿ ಭಾರತೀಯ ಕ್ರಿಕೆಟಿಗ ಆಕಾಶ್ ಚೋಪ್ರಾ. ಗಿಲ್ ಅವರ ಪ್ರತಿಭೆಯನ್ನು ಕೊಂಡಾಡಿದರು. ಅಲ್ಲದೆ, ವಿರಾಟ್ ಕೊಹ್ಲಿಗೆ ನೀಡಲಾಗಿದ್ದ ಕಿಂಗ್ ಬಿರುದನ್ನು ಕಿತ್ತುಕೊಂಡು ಶುಭ್ಮನ್ ಗಿಲ್ಗೆ ನೀಡಿದರು.
ಗಿಲ್ ಈಗ ಕಿಂಗ್”
ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಮಾತನಾಡಿದ ಅವರು, ದುಬೈನಲ್ಲಿ ನಡೆದ ಈ ಪಂದ್ಯದ ಬಗ್ಗೆ ಚರ್ಚಿಸಿದರು. ಈ ಐಸಿಸಿ ಟೂರ್ನಿಯ ಒತ್ತಡದ ಪರಿಸ್ಥಿತಿಯಲ್ಲಿ ಬಂದ ಈ ಶತಕವನ್ನು ಗಿಲ್ ಅವರ ಉತ್ತಮ ಏಕದಿನ ಶತಕ ಎಂದು ವರ್ಣಿಸಿದರು.
“ಇದು ಗಿಲ್ ಅವರ ಉತ್ತಮ ಏಕದಿನ ಇನಿಂಗ್ಸ್‌ಗಳಲ್ಲಿ ಒಂದು. ಇದು ಅವರ ಎಂಟನೇ ಶತಕ ಆದರೆ ಐಸಿಸಿ ಟೂರ್ನಿಯಲ್ಲಿನ ಅವರ ಪ್ರಥಮ ಶತಕ. ಐಸಿಸಿ ಟೂರ್ನಿಗಳಲ್ಲಿ ಒತ್ತಡ ಭಿನ್ನವಾಗಿರುತ್ತದೆ. ಅವರು ಎರಡು ಶತಕವೂ ಬಾರಿಸಿದ್ದಾರೆ. ಆದರೆ ಈ ಶತಕವೇ ಅತ್ಯುತ್ತಮ” ಎಂದು ಚೋಪ್ರಾ ಅಭಿಪ್ರಾಯಪಟ್ಟರು.
ಮುಂದುವರಿದ ಚೋಪ್ರಾ, ಗಿಲ್ ಅನ್ನು ಈ ಹಿಂದೆ ಪ್ರಿನ್ಸ್ ಎಂದು ಕರೆಯುತ್ತಿದ್ದರು. ಆದರೆ ಈಗ ಕಿಂಗ್ ಎಂದು ಬಿರುದು ನೀಡಬೇಕಾಗಿದೆ. 250ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದರೆ ಗಿಲ್ ಒಬ್ಬ ಶ್ರೇಷ್ಠ ಒಡಿಐ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಬಹುದು ಎಂದು ಅವರು ಭವಿಷ್ಯ ನುಡಿದರು.
“ನಾವು ಅವನನ್ನು ಪ್ರಿನ್ಸ್ ಅಂತ ಕರೆಯುತ್ತಿದ್ದೇವೆ. ಆದರೆ ಅವನು ಕಿಂಗ್‌ಗಿಂತ ಕಡಿಮೆ ಏನಿಲ್ಲ. ಅವರು ಒಡಿಐ ಕ್ರಿಕೆಟ್‌ನ ಸ್ವರೂಪವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ. ಒಡಿಐ ಪಂದ್ಯಗಳು ಕಡಿಮೆ ನಡೆಯುತ್ತವೆ. ಆದರೆ 250 ಪಂದ್ಯಗಳನ್ನು ಆಡಿದರೆ ಅವನು ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟರ್‌ಗಳ ಪೈಕಿ ಒಬ್ಬರಾಗಬಹುದು,” ಎಂದು ಚೋಪ್ರಾ ಹೇಳಿದರು.
“ಈ ಶತಕವು ಅವರ ವೃತ್ತಿಜೀವನದ ಅತ್ಯುತ್ತವಿಶೇಷವಾಗಿ, ಒಡಿಐ ವಕ್ರಿಕೆಟ್ ದೃಷ್ಟಿಯಿಂದ ನೋಡಿದರೆ ಅವರಿಗೆ ಅನುಕೂಲಕರ” ಎಂದೂ ಅವರು ಅಭಿಪ್ರಾಯಪಟ್ಟರು.
ಗಿಲ್ ಅವರದ್ದು ಪರಿಪಕ್ವ ಆಟ
ಕಳೆದ ಇನ್ನಿಂಗ್ಸ್ ಕುರಿತು ಚರ್ಚಿಸಿದ ಚೋಪ್ರಾ, ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಪರಿಪೂರ್ಣಗತೆಯನ್ನು ಶ್ಲಾಘಿಸಿದರು. ವಿಕೆಟ್‌ಗಳು ಪತನವಾಗುತ್ತಿದ್ದರೂ, ಗಿಲ್ ಸಹನೆ ತೋರಿ ತಂಡವನ್ನು ಮುನ್ನಡೆಸಿದರು ಎಂದು ಅವರು ಹೇಳಿದರು.
“ರೋಹಿತ್ ಶರ್ಮಾ ಒಂದೆಡೆ ರನ್ ಬಾರಿಸುತ್ತಿದ್ದರು. ಆದರೆ ಗಿಲ್ ಒತ್ತಡದಲ್ಲಿ ಸರಳ ಬ್ಯಾಟಿಂಗ್ ಮುಂದುವರಿಸಿದರು. ಅಂತೆಯೇ ದೊಡ್ಡ ಪಂದ್ಯದಲ್ಲಿ ಆಡುವ ಆಟಗಾರ ಅಂತಿಮವಾಗಿ ತಂಡವನ್ನು ಗೆಲ್ಲಿಸುತ್ತಾನೆ,” ಎಂದು ಅವರು ಹೇಳಿದರು.
ಪಂದ್ಯದ ಆರಂಭದಲ್ಲಿ ಗಿಲ್ ಮತ್ತು ರೋಹಿತ್ ಶರ್ಮಾ 69 ರನ್‌ಗಳ ಆರಂಭಿಕ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 41 ರನ್ ಬಾರಿಸಿ, ಟಸ್ಕಿನ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು.
ಒತ್ತಡದ ಕ್ಷಣದಲ್ಲಿ ಅಜೇಯ ಶತಕ
ಶುಭ್ಮನ್ ಗಿಲ್ ತಮ್ಮ ಇನ್ನಿಂಗ್ಸ್ ಅನ್ನು ಪ್ರಾರಂಭದಲ್ಲಿ ಆಕ್ರಮಣಕಾರಿ ಶೈಲಿಯಲ್ಲಿ ಆಡಿದರು. ರೋಹಿತ್ ಶರ್ಮಾ ಆಕ್ರಮಣ ನಡೆಸಿದಂತೆ, ಗಿಲ್ ಮುನ್ನಡೆಸಿದರು.
ಪಿಚ್ ಬ್ಯಾಟಿಂಗ್‌ಗೆ ಕಠಿಣವಾಗುತ್ತಾ ಹೋಯಿತು, ಸ್ಪಿನ್ನರುಗಳನ್ನು ಎದುರಿಸಲು ಕಷ್ಟವಾಯಿತು. ಆದರೆ, ಗಿಲ್ ತಮ್ಮ ಶ್ರೇಷ್ಠ ಆಟಗಾರ ಎಂಬುದನ್ನು ಕಾಪಾಡಿದರು.
ಅವರು 125 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು 2019ರ ವಿಶ್ವಕಪ್ ನಂತರ ಭಾರತೀಯ ಬ್ಯಾಟ್ಸ್‌ಮನ್ ಮಾಡಿದ ಅತ್ಯಂತ ನಿಧಾನ ಶತಕ. ಆದರೂ ಇದು ಐಸಿಸಿ ಟೂರ್ನಿಯಲ್ಲಿನ ಅವರ ಮೊದಲ ಶತಕ ಮತ್ತು ಭಾರತಕ್ಕೆ ಮಹತ್ವದ ಗೆಲುವು ತಂದುಕೊಟ್ಟ ಅಮೂಲ್ಯ ಇನ್ನಿಂಗ್ಸ್ ಆಗಿತ್ತು. ಗಿಲ್ 129 ಎಸೆತಗಳಲ್ಲಿ 101 ರನ್ ಗಳಿಸಿದ್ದರು. 9 ಬೌಂಡರಿ ಹಾಗೂ 2 ಸಿಕ್ಸರ್ ಹೊಡೆದಿದ್ದರು.