ಹಾಸನ : ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ನಾಡಿನ ಕುರಿತು ಭವಿಷ್ಯ ನುಡಿದಿದ್ದಾರೆ. ಈ ವೇಳೆ ಸಿಎಂಗೆ ಯಾವ ಕಂಟಕವೂ ಇಲ್ಲ ಎಂದಿದ್ದು, ರಾಜ್ಯ ರಾಜಕೀಯದ ಸಂಚಲನಕ್ಕೆ ಕಾರಣವಾಗಿದೆ.
ಈ ವರ್ಷದ ಮಳೆ ಇನ್ನೂ ಮುಗಿದಿಲ್ಲ. ಆದರೆ, 5 ಕಡೆಯಿಂದಲೂ ಆಪತ್ತು ಇದೆ. ಇನ್ನೂ ಆಕಾಶದಿಂದ ಒಂದು ದೊಡ್ಡ ವಿಪತ್ತು ಬರುವುದಿದೆ ಎಂದು ಹೇಳಿದ್ದಾರೆ.
ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಅಂತ ಹೇಳಿದ್ದೆ. ಅದೇ ರೀತಿ ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ ಎಂದಿದ್ದಾರೆ.
ಈ ವರ್ಷ ಮಳೆ ಉತ್ತಮವಾಗುತ್ತದೆ. ಮಳೆಯಿಂದ ಅನಾವೃಷ್ಠಿಯಾಗುತ್ತದೆ. ಪ್ರಾಕೃತಿಕ ದೋಷ ಇದೆ. ಭೂಮಿ, ಜಲ, ಅಗ್ನಿ, ವಾಯು, ಆಕಾಶ ಸೇರಿ ಎಲ್ಲಾ ಕಡೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.
ಆಕಾಶದಲ್ಲಿ ತೊಂದರೆ ಆಗುವ ದೊಡ್ಡ ಸುದ್ದಿ ಇದೆ. ಆಕಾಶದಿಂದ ಆಪತ್ತು ಬರುತ್ತದೆ. ಹಿಂದೆ ಜನ ಇದ್ದಂಗೆ ಸಾಯ್ತಾರೆ. ಭೂಮಿ ಬಿರುಕು ಬಿಡುತ್ತೆ ಎಂದಿದ್ದೆ. ಗುಡ್ಡ ಹೋಗುತ್ತೆ ಎಂದು ಹೇಳಿದ್ದೆ. ಪ್ರವಾಹನದಲ್ಲಿ ಜಗತ್ತಿನಾದ್ಯಂತ ಮುಳುಗುತ್ತವೆ ಎಂದು ಹೇಳಿದ್ದೆ. ಈಗ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ.
ಒಂದು ಆಕಾಶ ತತ್ವ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೆ ಭಂಗ ಬೀರುತ್ತದೆ. ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸಿದ. ಮಹಾಭಾರತದಲ್ಲಿ ಕೃಷ್ಣ ಇದ್ದ. ಗದಾಯುದ್ಧದಲ್ಲಿ ಭೀಮ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ತಾನೆ ಎಂದು ಮಾರ್ಮಿಕವಾಗಿ ಮಾತನಾಡಿ ಮಾತನಾಡಿದ್ದಾರೆ.