ಬೆಂಗಳೂರು: ಏಳನೇ ವೇತನ ಆಯೋಗ (7th Pay Commission)ದ ವರದಿಯಂತೆ ವೇತನ ನೀಡುವಂತೆ ಕೆಎಂಎಫ್ (KMF) ನೌಕರರು ಮತ್ತು ಅಧಿಕಾರಿಗಳು ಶನಿವಾರ ಮುಷ್ಕರ ನಡೆಸಲು ಮುಂದಾಗಿದ್ದರು. ಆದರೆ, ಕೆಎಂಎಫ್ ಆಡಳಿತ ಮಂಡಳಿ, ಬೇಡಿಕೆ ಪರಿಶೀಲನೆ ನಡೆಸಲು ಮೂರು ದಿನಗಳ ಸಮಯ ಕೇಳಿತ್ತು. ಆದರೆ, ಕೆಎಂಎಫ್ ನೌಕರರ ಸಂಘ 7 ದಿನಗಳ ಕಾಲಾವಕಾಶ ನೀಡಿದೆ.
ವೇತನ ಪರಿಷ್ಕರಣೆ ನಡೆಸಬೇಕೆಂದು ಕೆಎಂಎಫ್ ನೌಕರರ ಸಂಘ ಮುಷ್ಕರಕ್ಕೆ ಮುಂದಾಗಿತ್ತು. ಆದರೆ, ಕೆಎಂಎಫ್ ಆಡಳಿತ ಮಂಡಳಿ ಸಮಯ ಕೇಳಿತು. ಈ ವಿಷಯವಾಗಿ ಕೆಎಂಎಫ್ ನೌಕರರ ಸಂಘದ ಗೌರವ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ಮುಷ್ಕರ ಮುಂದೂಡಲಾಗಿದೆ ಎಂದಿದ್ದಾರೆ.
ಕೆಎಂಎಫ್ 16 ಸಾವಿರ ಕೋಟಿ ವಹಿವಾಟು ಇರುವ ಸಂಸ್ಥೆ. 16 ಜಿಲ್ಲಾ ಒಕ್ಕೂಟ, 6 ಸಾವಿರ ಜನ ನೇರ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಸರ್ಕಾರ, 7 ನೇ ವೇತನ ಅನುಷ್ಠಾನ ಜಾರಿ ಮಾಡಿದೆ. ಜಿಲ್ಲಾ ಮಟ್ಟದ ಒಕ್ಕೂಟಗಳಲ್ಲಿ ಏಕ ಪ್ರಕಾರದ ಭತ್ಯೆ ಇಲ್ಲ. ಹೀಗಾಗಿ ನೌಕರರು ಮತ್ತು ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಇದಕ್ಕೆ ಸರ್ಕಾರ ಕೂಡ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ನೌಕರಸ್ಥರು 90 ಲಕ್ಷ ಲೀಟರ್ ಹಾಲು ಪ್ರೊಕ್ಯೂರ್ ಮಾಡುತ್ತಿದ್ದಾರೆ. 60 ಲಕ್ಷ ಹಾಲು ಬೇಡಿಕೆ ಇದೆ.
30 ಲಕ್ಷ ಹಾಲು ಬೇರೆ ಬೇರೆ ರೀತಿ ಕನ್ವರ್ಟ್ ಮಾಡಲಾಗಿದೆ. ಕೆಎಂಎಫ್ ಆಫೀಸರ್ಸ್ ಅಸೋಸಿಯೇಶನ್ ವತಿಯಿಂದ ಸಾಕಷ್ಟು ಬೇಡಿಕೆ ಇಡಲಾಗಿದೆ. ಈ ಪೈಕಿ ವೇತನ ಮತ್ತು ಭತ್ಯೆ ಪರಿಷ್ಕರಣೆ ಮಾಡಬೇಕೆಂದು ನೌಕರಸ್ಥರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮುಷ್ಕರಕ್ಕೆ ಮುಂದಾಗಲಾಗಿತ್ತು. ಆದರೆ, ಆಡಳಿತ ಮಂಡಳಿ ಮೂರು ದಿನಗಳ ಸಮಯ ಕೇಳಿತ್ತು. ಆಫೀಸರ್ಸ್ ಅಸೋಸಿಯೇಶನ್ 7 ದಿನಗಳ ಕಾಲ ಅವಕಾಶ ನೀಡಿದೆ. ಹೀಗಾಗಿ ನಾಳೆ ಮುಷ್ಕರ ಇರುವುದಿಲ್ಲ ಎಂದಿದ್ದಾರೆ.