ನವ ದೆಹಲಿಗೆ ಅಕ್ಷರ್ ಪಟೇಲ್ ಅವರನ್ನು 18ನೇ ಆವೃತ್ತಿಯ ಐಪಿಎಲ್ ನಾಯಕನನ್ನಾಗಿ ಘೋಷಿಸಿದ ಕೆಲವೇ ದಿನಗಳ ನಂತರ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಉಪನಾಯಕನ ಹೆಸರನ್ನು ಪ್ರಕಟಿಸಿದೆ. ಆದರೆ ಈ ಪ್ರಕಟಣೆ ಕೆಎಲ್ ರಾಹುಲ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ತಂಡದ ಉಪನಾಯಕ ಸ್ಥಾನಕ್ಕೆ ರಾಹುಲ್ ಅವರನ್ನು ಪರಿಗಣಿಸದೇ, ಆರ್ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಆಯ್ಕೆ ಮಾಡಿರುವುದು ಬೇಸರ ಉಂಟು ಮಾಡಿದೆ.
ಕಳೆದ ಮೂರು ಋತುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್, ದಕ್ಷಿಣ ಆಫ್ರಿಕಾ ತಂಡಕ್ಕೂ ನಾಯಕನಾಗಿದ್ದರು. ಅಕ್ಷರ್ ಪಟೇಲ್ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಕಾರಣ, ಉಪನಾಯಕನ ಸ್ಥಾನಕ್ಕೆ ಕೆಎಲ್ ರಾಹುಲ್ ಆಯ್ಕೆಯಾಗಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಫಾಫ್ ಡು ಪ್ಲೆಸಿಸ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೊಟ್ಟಿದ್ದೆಷ್ಟು?
ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫಾಫ್ ಡು ಪ್ಲೆಸಿಸ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತ್ತು. ಹೀಗಾಗಿ ಫಾಫ್ ಆರಂಭಿಕ ಪ್ಲೇಯಿಂಗ್ 11ರಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಹ್ಯಾರಿ ಬ್ರೂಕ್ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಕಾರಣ ಫಾಫ್ಗೆ ಚಾನ್ಸ್ ಸಿಕ್ಕಿದೆ.
ಫಾಫ್ ತಮ್ಮ 145 ಐಪಿಎಲ್ ಪಂದ್ಯಗಳ 138 ಇನ್ನಿಂಗ್ಸ್ಗಳಲ್ಲಿ 4571 ರನ್ ಗಳಿಸಿದ್ದಾರೆ. 2024ರಲ್ಲಿ 438 ರನ್, 2023ರಲ್ಲಿ 730 ರನ್ ಹಾಗೂ 2022ರಲ್ಲಿ 468 ರನ್ ಗಳಿಸಿದ್ದರು. ಆರ್ಸಿಬಿಒ ಫಾಫ್ ಅವರನ್ನು ಬಿಟ್ಟುಕೊಟ್ಟಿರುವುದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.
ಅಕ್ಷರ್ ಪಟೇಲ್ ಹೇಳಿದ್ದೇನು?
ನಾಯಕತ್ವ ಸಿಕ್ಕಿದ ಬಗ್ಗೆ ಅಕ್ಷರ್ ಪಟೇಲ್ ಸಂತಸ ವ್ಯಕ್ತಪಡಿಸಿದ್ದಾರೆ. “ಡೆಲ್ಲಿ ತಂಡದ ನಾಯಕನಾಗಿ ಆಯ್ಕೆಯಾಗುವುದು ನನಗೆ ದೊಡ್ಡ ಗೌರವ. ನನ್ನ ಮೇಲೆ ನಂಬಿಕೆ ಇಟ್ಟ ಮಾಲೀಕರಿಗೂ, ಸಹಾಯಕ ಸಿಬ್ಬಂದಿಗೂ ಧನ್ಯವಾದ” ಎಂದು ಅವರು ಹೇಳಿದ್ದಾರೆ. ಡೆಲ್ಲಿ ಫ್ರಾಂಚೈಸಿ ಅವರನ್ನು 18 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡ (IPL 2025)**
ಅಕ್ಷರ್ ಪಟೇಲ್ (ನಾಯಕ), ಫಾಫ್ ಡು ಪ್ಲೆಸಿಸ್ (ಉಪನಾಯಕ) , ಕುಲ್ದೀಪ್ ಯಾದವ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಟಿ ನಟರಾಜನ್, ಕರುಣ್ ನಾಯರ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾನಾ ವಿಜಯ್, ಮಾಧವ್ ತಿವಾರಿ.