ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ (KL Rahul) ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.
ಈ ವಿಚಾರವನ್ನು ಸ್ವತಃ ಅಥಿಯಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಐಪಿಎಲ್ಗಾಗಿ (IPL 2025) ಕೆಲವು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದರು. ಆದರೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಅವರು, ತಂಡವನ್ನು ತೊರೆದು ಮನೆಗೆ ಮರಳಿದ್ದರು. ಈಗ ತಂದೆಯಾದ ಸಂತಸದಲ್ಲಿದ್ದಾರೆ.
ರಾಹುಲ್ ಮತ್ತು ಅತಿಯಾ ತಮ್ಮ ಮಗಳ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಭಿಮಾನಿಗಳಲ್ಲದೆ, ಕ್ರಿಕೆಟ್ ಮತ್ತು ಚಲನಚಿತ್ರ ಜಗತ್ತಿನ ಪ್ರಸಿದ್ಧ ತಾರೆಯರು ಕೂಡ ಅಭಿನಂದಿಸುತ್ತಿದ್ದಾರೆ.