ಐಪೆಲ್ ನ ಸೀಸನ್-18ಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಎಲ್ಲ ತಂಡಗಳು ಕೆಲವು ಆಟಗಾರರನ್ನು ಉಳಿಸಿಕೊಂಡು, ಹರಾಜಿಗಾಗಿ ತಯಾರಿ ನಡೆಸುತ್ತಿವೆ. ಅನುಭವಿ ಆಟಗಾರ ರಿಂಕು ಸಿಂಗ್ ಗೆ ಕೆಕೆಆರ್ ತಂಡದ ನಾಯಕತ್ವ ಸಿಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಕೆಕೆಆರ್ ಫ್ರಾಂಚೈಸಿ ರಿಂಕು ಸಿಂಗ್ ರನ್ನು ಬರೋಬ್ಬರಿ 13 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ. ಇತ್ತ ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಈ ಸಲ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದು, ಹೀಗಾಗಿ ಕೆಕೆಆರ್ ತಂಡದಿಂದ ಹೊರಬಂದಿದ್ದಾರೆ. ಹೀಗಾಗಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮುಂದಿದೆ.
ನಾಯಕತ್ವದ ರೇಸ್ನಲ್ಲಿ ರಿಂಕು ಸಿಂಗ್ ಹೆಸರು ಕೇಳಿ ಬರುತ್ತಿದೆ. ಆದರೆ, ಕೆಕೆಆರ್ ಅಧಿಕೃತವಾಗಿ ಘೋಷಿಸಿಲ್ಲ. ಒಂದು ವೇಳೆ ಪೂರ್ಣ ಮೆಗಾ ಹರಾಜಿನ ಮೂಲಕ ಪರಿಪೂರ್ಣ ಆಟಗಾರ ಸಿಗದಿದ್ದರೆ, ರಿಂಕು ಸಿಂಗ್ ಗೆ ನಾಯಕತ್ವ ಸಿಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ತಂಡದಲ್ಲಿ ಅನುಭವಿ ಆಟಗಾರರಾಗಿ ಸುನಿಲ್ ನರೈನ್, ಆ್ಯಂಡ್ರೆ ರಸೆಲ್ ಸೇರಿದಂತೆ ಅನೇಕರಿದ್ದಾರೆ. ಹೀಗಾಗಿ ಇವರೆಲ್ಲರ ಮಾರ್ಗದರ್ಶನದಲ್ಲಿ ರಿಂಕು ಉತ್ತಮವಾಗಿ ತಂಡದ ಜವಾಬ್ದಾರಿ ನಿರ್ವಹಿಸಬಹುದು ಎಂದು ಫ್ರಾಂಚೈಸಿ ನಂಬಿದೆ ಎಂದು ವರದಿ ಹೇಳಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ರಿಂಕು ಸಿಂಗ್ ಗೆ 13 ಕೋಟಿ ರೂ. ನೀಡಿದರೆ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್ಗೆ ತಲಾ 12 ಕೋಟಿ ರೂ. ನೀಡಿದೆ. ಹರ್ಷಿತ್ ರಾಣಾ ಹಾಗೂ ರಮಣ್ದೀಪ್ ಸಿಂಗ್ಗೆ ತಲಾ 4 ಕೋಟಿ ರೂ. ನೀಡಲಾಗಿದೆ.