ಬೆಂಗಳೂರು : ಕರ್ನಾಟಕದ ಬೆಳಗಾವಿಯಲ್ಲಿರುವ ಕಿತ್ತೂರು ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಕರು ಸೇರಿ ಹಲವು ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹರು ಹಾಗೂ ಆಸಕ್ತಿ ಹೊಂದಿದವರು ಅರ್ಜಿ ಸಲ್ಲಿಸುವ ಮೂಲಕ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಸೈನಿಕ ಶಾಲೆ ಕಿತ್ತೂರು
ಒಟ್ಟು ಹುದ್ದೆಗಳು: ವಿವಿಧ
ಹುದ್ದೆ ಹೆಸರು: ಶಿಕ್ಷಕರು ಇತ್ಯಾದಿ
ಉದ್ಯೋಗ ಸ್ಥಳ: ಕಿತ್ತೂರು, ಬೆಳಗಾವಿ
ಅರ್ಜಿ ಸಲ್ಲಿಕೆ ವಿಧಾನ: ಆಫ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜನವರಿ 27
ಪೋಸ್ಟ್ ಗ್ರ್ಯಾಜುಯೇಟ್ ಟೀಚರ್, ಟ್ರೈನ್ಡ್ ಗ್ರ್ಯಾಜುಯೇಟ್ ಟೀಚರ್, ಡಾನ್ಸ್ ಟೀಚರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಎಸ್ಸೆಸ್ಸೆಲ್ಸಿ, ಪದವಿ, ಬಿ.ಎಡ್, ಬಿಪಿಎಡ್, ಎಂಬಿಎಡ್ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಸೈನಿಕ ಶಾಲೆಯ ಅಧಿಕೃತ ವೆಬ್ ಸೈಟ್ kittursainikschool.org ಗೆ ಭೇಟಿ ನೀಡಬೇಕು
ಕಿತ್ತೂರು ಸೈನಿಕ ಶಾಲೆಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.
ನಿಮಗೆ ಬೇಕಾದ ಹುದ್ದೆಯ ಅಧಿಸೂಚನೆ ಓದಬೇಕು.
ಆನ್ ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು
ಸಲ್ಲಿಕೆ ಮಾಡಲಾದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು
ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ :
Principal, Kittur Rani Channamma Girls Residential Sainik School, Kittur – 591115. ಅರ್ಜಿ ಹಾಗೂ ದಾಖಲೆಗಳ ಸಾಫ್ಟ್ ಕಾಪಿಗಳನ್ನು kittursainikschool@gmail.com ಗೂ ಮೇಲ್ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್‌ನಿಂದ ವಾಷಿಂಗ್ಟನ್ ಸುಂದರ್ ಅನುಮಾನ? ಜಡೇಜಾ ಆಯ್ಕೆ ಪ್ರಶ್ನಿಸಿದ ಶ್ರೀಕಾಂತ್



















