ಚಾಮರಾಜನಗರ: ಅಣ್ಣ-ತಂಗಿ (Brother-Sister)ಯ ಬಾಂಧವ್ಯ ಜನುಮ ಜನುಮದ ಅನುಬಂಧ ಅಂತಾರೆ. ಆದರೆ, ಇಲ್ಲೊಬ್ಬ ಪಾಪಿ ಕ್ಷುಲ್ಲಕ ಕಾರಣಕ್ಕೆ ತಂಗಿಯನ್ನೇ ಕೊಲೆ ಮಾಡಿದ್ದಾನೆ.
ಚಾಮರಾಜನಗರದಲ್ಲಿ ಈ ಘಟನೆ ನಡೆದಿದೆ. ಸೈಯದ್ ಫರ್ಮಾನ್( 31) ಕೊಲೆ ಮಾಡಿರುವ ಪಾಪಿ. ಸೈಯದ್ ಗೆ ವಿಪರೀತ ಬೆಟ್ಟಿಂಗ್ ಹುಚ್ಚು. ಸಾಕಷ್ಟು ಹಣ ಕಳೆದುಕೊಂಡಿದ್ದಾನೆ. ಹೀಗಾಗಿ ಆತ ಯಾವಾಗಲೂ ಸಿಟ್ಟಿನಲ್ಲೇ ಇರುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿ ಆಗಾಗ ಜಗಳ ಮಾಡುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಸೈಯದ್ ಫರ್ಮಾನ್ ಮನೆಯಲ್ಲಿ ರಾತ್ರಿ ಊಟ ಮಾಡುತ್ತಿದ್ದ ವೇಳೆ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸಿದ್ದಾನೆ. ಆಗ ತಂಗಿ ಮಗುವಿಗೆ ಜ್ವರ ಇದೆ. ಸೌತೆಕಾಯಿ ತಿನ್ನಿಸಬೇಡ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಪಾಪಿ ಅಡುಗೆ ಮನೆಯಲ್ಲಿ ಮಾಂಸ ಕತ್ತರಿಸಲು ತಂದಿದ್ದ ಕತ್ತಿಯಿಂದ ತಂಗಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನು ಬಿಡಿಸಲು ಬಂದ ಅತ್ತಿಗೆ ಹಾಗೂ ತಂದೆಯ ಮೇಲೆಯೂ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ