ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಬನ್ನಿ ಬನ್ನಿ ಜನರೇ ಅಂತ ಹೇಳ್ಕೊಂಡು ಸಿಕ್ಕಾಪಟ್ಟೆ ವೈರಲ್ ಆದ ಹುಡುಗಿ ಅಂದ್ರೆ ಕಿಪ್ಪಿ ಕೀರ್ತಿ.
ತನ್ನ ಮಾತುಗಳಿಂದಲೇ ಎಲ್ಲರನ್ನು ನಗಿಸುವ ಕಲೆ ಈಕೆಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಗಳನ್ನು ಅನುಭವಿಸಿ, ನೆಗೆಟಿವ್ ಕಾಮೆಂಟ್ ಗಳಿಗೆ ತಲೆ ಕೆಡಿಸಿಕೊಳ್ಳದ ಈ ಹುಡುಗಿ ಅಪ್ಪಟ ಪುನೀತ್ ಅಭಿಮಾನಿ.
ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಆಕ್ಟ್ ಮಾಡುವಂತಹ ಚಾನ್ಸ್ ಗಿಟ್ಟಿಸಿಕೊಂಡಿದ್ದಾಳೆ ಈ ಹುಡುಗಿ. ತನಗೆ ಅವಕಾಶ ಸಿಕ್ಕ ವಿಚಾರವನ್ನು ಈಕೆ ಲೈವ್ ಗೆ ಬಂದು ತಿಳಿಸಿದ್ದಾಳೆ. ನನಗೆ ಸಿನಿಮಾಗಳಲ್ಲಿ ಆಕ್ಟ್ ಮಾಡಬೇಕು ಅಂತ ಆಸೆ ಇತ್ತು. ಆದರೆ ಯಾವುದೇ ಅವಕಾಶ ಸಿಗಲಿಲ್ಲ. ಆದರೆ ಈಗ ಅವಕಾಶ ಬಳಿ ಬಂದಿದೆ ಅಂತ ಹೇಳಿಕೊಂಡಿದ್ದಾಳೆ. ನನಗೂ ಅವಕಾಶ ಸಿಗುತ್ತಾ ಅಂತ ಅಂದುಕೊಂಡಿದ್ದೆ. ಆದರೆ ಈಗ ಆ ಅದೃಷ್ಟ ನನ್ನದಾಗಿದೆ ಅಂತ ಕಿಪ್ಪಿ ಕೀರ್ತಿ ಖುಷಿ ಪಟ್ಟಿದ್ದಾಳೆ.