ಭಾರತ (Team India) ತಂಡ ಎರಡನೇ ಟಿ20 ವಿಶ್ವಕಪ್ ಕ್ರಿಕೆಟ್ (T20 World Cup) ಕಪ್ ಗೆಲ್ಲುವುದರ ಮೂಲಕ ವಿರಾಟ್ ಕೊಹ್ಲಿ (Virat Kohli) ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ವಿಕೆಟ್ ಉರುಳುತ್ತಿದ್ದಾಗ ಬಂಡೆಗಲ್ಲಿನಂತೆ ಒಂದು ಬದಿಯಲ್ಲಿ ನಿಂತು 76 ರನ್ (59 ಎಸೆತ, 6 ಬೌಂಡರಿ, 2 ಸಿಕ್ಸರ್) ಸಿಡಿಸಿದ ವಿರಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇದು ನನ್ನ ಕೊನೆಯ ಟಿ 20 ವಿಶ್ವಕಪ್. ಇಲ್ಲಿಯವರೆಗೆ ಇದನ್ನೇ ಸಾಧಿಸಲು ನಾವು ಬಯಸುತ್ತಿದ್ದೆವು. ಅದು ಆಗಿದೆ ಎಂದು ಹೇಳಿದರು.
ಅಲ್ಲದೇ, ಇದು ಭಾರತಕ್ಕಾಗಿ ಆಡುತ್ತಿರುವ ನನ್ನ ಕೊನೆಯ ಟಿ20 ಪಂದ್ಯ. ಮುಂದೆ ಯುವ ಪೀಳಿಗೆ ಕ್ರಿಕೆಟ್ ತಂಡದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಹೇಳಿದ ಅವರು, ಈ ಯಶಸ್ಸಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
