ಮಂಡ್ಯ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ತಾಲೂಕಿನ ಕನ್ನಹಟ್ಟಿ ಗ್ರಾಮದಲ್ಲಿ ನಡೆದಿದೆ. ಅನುಮಾನದ ಮೇಲೆ ತನ್ನ ಹೆಂಡತಿಯ ಅಕ್ಕನ ಗಂಡನನ್ನೇ ವ್ಯಕ್ತಿ ಕೊಲೆ ಮಾಡಿದ್ದಾನೆ. ತಾಲೂಕಿನ ಮುದಗಂದೂರು ಗ್ರಾಮದ ನಾಗೇಶ್(45) ಕೊಲೆಯಾಗಿರುವ ದುರ್ದೈವಿ. ಹುಚ್ಚೇಗೌಡನಕೊಪ್ಪಲು ಗ್ರಾಮದ ನಾಗೇಶ್(43)ಕೊಲೆ ಮಾಡಿರುವ ಆರೋಪಿ.
ಕೊಲೆ ಮಾಡಿರುವ ಆರೋಪಿ ಹಾಗೂ ಕೊಲೆಯಾದ ವ್ಯಕ್ತಿ ಇಬ್ಬರು ಅಕ್ಕ-ತಂಗಿಯರನ್ನು ಮದುವೆಯಾಗಿದ್ದರು. ಆದರೆ, ನಾಗೇಶ್ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಕೊಲೆ ಮಾಡಿದ್ದಾನೆ. ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಇಬ್ಬರೂ ನಾಗೇಶ್ ಗಳ ಕುಟುಂಬಗಳೆರಡೂ ಬೆಂಗಳೂರಿನ ನಾಗಸಂದ್ರದಲ್ಲಿ ವಾಸವಾಗಿದ್ದವು. ಕೊಲೆಯಾದ ನಾಗೇಶ್ ಆಟೋ ಚಾಲಕನಾಗಿದ್ದರೆ, ಆರೋಪಿ ನಾಗೇಶ್ ಪ್ಯಾಕರ್ಸ್ ಅಂಡ್ ಮೂವರ್ಸ್ ಕೆಲಸ ಮಾಡುತ್ತಿದ್ದ. ಸ್ವತಃ ಬಾವನೇ ನಾದಿನಿ ಜೊತೆ ಆಕ್ರಮ ಸಂಬಂಧವೊಂದಿದ್ದಾನೆ ಎಂಬ ಶಂಕೆ ಆರೋಪಿಗೆ ಇತ್ತು. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.