ಬೆಳಗಾವಿ : ತಳ್ಳುವ ಗಾಡಿ ತಂದು ಎಟಿಎಂ ಮಷಿನನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಬೆಳಗಾವಿ ತಾಲೂಕು ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ಬ್ಯಾಂಕ್ ಎಂಟಿಎಂಗೆ ಮೂವರ ಗ್ಯಾಂಗ್ ಕನ್ನಹಾಕಿದೆ. ಮೂರು ಜನ ಕಳ್ಳರು ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಗ್ಯಾಸ್ ಕಟ್ಟರ್ ಯಂತ್ರವನ್ನು ಹೊತ್ತುಕೊಂಡು ಬಂದಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಕಳ್ಳರ ವಾಹನದಲ್ಲಿ ಬಾರದೇ ಅಲ್ಲೇ ಪಕ್ಕದಲ್ಲೇ ಇದ್ದ ತಳ್ಳು ಗಾಡಿ ತಂದು ಎಟಿಎಂ ಮುಂದೆ ನಿಲ್ಲಿಸಿದ್ದಾರೆ. ಎಟಿಎಂ ಹೊತ್ತಿಕೊಂಡು ಬಂದು ತಳ್ಳೊ ಗಾಡಿಯಲ್ಲಿ ಸುಮಾರು 200ಮೀ. ಕ್ರಮಿಸಿದ್ದಾರೆ. ಅಲ್ಲಿಂದ ತಮ್ಮ ವಾಹನಕ್ಕೆ ಎಟಿಎಂ ಯಂತ್ರ ಸಾಗಿಸಿ, ಎಸ್ಕೇಪ್ ಆಗಿದ್ದಾರೆ.
ಖದೀಮರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಹಣ ಎಟಿಎಂನಲ್ಲಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ರಾಂಚಿ ವೀರಾವೇಶದ ನಂತರ ಆನ್‌ಲೈನ್ ಟ್ರೋಲಿಂಗ್ ಬಗ್ಗೆ ಮಾತನಾಡಿದ ಹರ್ಷಿತ್ ರಾಣಾ



















