ಬಿಗ್‌ಬಾಸ್ ಸೀಸನ್ 12ರ ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿಯಿದ್ದು, ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಚಪ್ಪಾಳೆ ಬಗ್ಗೆ ಸಖತ್ ಚರ್ಚೆಗಳು ಆಗುತ್ತಿವೆ. ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಒಳ್ಳೆಯದ್ದು ಮಾತನಾಡಿದ್ರೂ ಮಾತಾಡ್ತಾರೆ. ಕೆಟ್ಟದ್ದು ಮಾತನಾಡಿದ್ದರೂ ಮಾತಾಡ್ತಾರೆ. ಸರಿ ಇವಾಗ ಯಾರಿಗೆ ಕೊಡಬೇಕು? ಹಾಗಾದ್ರೆ? ಇಡೀ ತಂಡ, ಸುದೀಪ್ ಸರ್ ಅವರು ಎಲ್ಲವನ್ನೂ ನೋಡಿಯೇ ಕೊಟ್ಟಿರ್ತಾರೆ. ಯಾರಿಗೆ ಕೊಡಬೇಕು ಅಂತ ನಿರ್ಧಾರ ಮಾಡಿ ಕೊಡೋದು ದೊಡ್ಡ ಸೆಗ್‌ಮೆಂಟ್. ಕಿಚ್ಚನ ಚಪ್ಪಾಳೆ ಯೋಚನೆ ಮಾಡಿಯೇ ಕೊಡ್ತಾರೆ ಎಂದು ರಜತ್ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ದೊಡ್ಡದು, ಮಹತ್ವ ಹೊಂದಿರುವುದು ಕಿಚ್ಚನ ಚಪ್ಪಾಳೆ. ಅದನ್ನು ತುಂಬಾ ಯೋಚನೆ ಮಾಡಿ ಕೊಟ್ಟಿರುತ್ತಾರೆ. ಅಶ್ವಿನಿ ಅವರಿಗಾಗಲಿ, ಧ್ರುವಂತ್ ಅವರಿಗಾಗಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ ಎಂದರೆ ಅವರು ಅರ್ಹರುನಿಮಗೆ ಯಾರಿಗೆ ಬೇಕೋ ಅವರಿಗೇ ಕಿಚ್ಚನ ಚಪ್ಪಾಳೆ ಕೊಟ್ಟುಕೊಂಡು ಹೋಗೋಕೆ ಆಗತ್ತಾ? ಆಗಲ್ಲ ತಾನೇ? ಈಗ ಕಿಚ್ಚನ ಚಪ್ಪಾಳೆ ಕೊಟ್ಟಿರುವುದು ಸರಿ ಇದೆ ಅಂತ ನನಗೆ ಅನಿಸುತ್ತದೆ’ ಎಂದು ರಜತ್ ಅವರು ಹೇಳಿದ್ದಾರೆ.
ಕಳೆದ ವಾರದ ಎಲಿಮಿನೇಷನ್‌ನಲ್ಲಿ ರಾಶಿಕಾ ಶೆಟ್ಟಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಸದ್ಯ ಧನುಷ್, ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಕಾವ್ಯ ಮತ್ತು ಧ್ರುವಂತ್ ಅವರು ಮನೆಯೊಳಗೆ ಉಳಿದುಕೊಂಡಿದ್ದಾರೆ. ಇವರಲ್ಲೀಗ ಧನುಷ್ ಅವರನ್ನು ಹೊರತುಪಡಿಸಿ, ಮಿಕ್ಕ ಎಲ್ಲಾ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ನೇಮಕಾತಿ : ವರ್ಷಕ್ಕೆ 20 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್



















