ಬೆಂಗಳೂರು: ಏ. 18ಕ್ಕೆ ವೀರಚಂದ್ರಹಾಸ ಚಿತ್ರ ತೆರೆಗೆ ಬರಲಿದ್ದು, ಪ್ರತಿಯೊಬ್ಬರೂ ಚಿತ್ರ ನೋಡಬೇಕೆಂದು ನಟ ಸುದೀಪ್ ಸಿನಿ ರಸಿಕರಲ್ಲಿ ಮನವಿ ಮಾಡಿದ್ದಾರೆ.
ಚಿತ್ರ ಹಾಗೂ ಚಿತ್ರದ ಮ್ಯೂಸಿಕ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿ ತಂಡಕ್ಕೆ ಸುದೀಪ್ ಶುಭ ಹಾರೈಸಿದ್ದಾರೆ. ಈ ರೀತಿಯ ಯಕ್ಷಗಾನ ಹಿನ್ನೆಲೆಯಲ್ಲಿನ ಈ ರೀತಿಯ ಮೂರ್ತಿ, ಮೊಮೆಂಟೋ ಮೊದಲ ಬಾರಿಗೆ ನನ್ನ ಮನೆಗೆ ಬಂದಿದೆ. ಇದನ್ನು ಕಂಡು ನನಗೆ ತುಂಬಾ ಖುಷಿ ಆಯಿತು. ಈ ಚಿತ್ರದ ಮೇಕಿಂಗ್ ವಿಡಿಯೋ ನೋಡಿದೆ. ತುಂಬಾ ಚೆನ್ನಾಗಿ ಬಂದಿದೆ. ತುಂಬಾ ಎಫರ್ಟ್ ಹಾಕಿದ್ದಾರೆ. ಯಕ್ಷಗಾನ ಸಂಸ್ಕೃತಿ ನಮ್ಮ ಬದುಕಿನೊಂದಿಗೆ ಹಾಸು ಹೊಕ್ಕಾಗಿದೆ. ಆ ಕಲ್ಚರ್ ಬೆಳೆಸಿ, ಉಳಿಸಬೇಕು. ಅದಕ್ಕಾಗಿ ಈ ಅದ್ಭುತ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು. ಶಿವಣ್ಣ ಕೂಡ ಆ ಮೇಕಪ್ ನಲ್ಲಿ ಕಾಣಿಸಿಕೊಂಡಿದ್ದು ತುಂಬಾ ಖುಷಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಿತ್ರ ತಂಡ ತುಂಬಾ ಎಫರ್ಟ್ ಹಾಕಿದೆ. ಟ್ರೇಲರ್ ಕೂಡ ನೋಡಿದೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಕರಾವಳಿ ವರ್ಗ ಅಷ್ಟೇ ಅಲ್ಲ. ಎಲ್ಲ ಕಡೆಯ ಜನರು ನೋಡಿ ಈ ಚಿತ್ರವನ್ನು ಹಾರೈಸಬೇಕು. ಈ ಚಿತ್ರಕ್ಕೆ ಎಲ್ಲರೂ ತುಂಬಾ ಸಪೋರ್ಟ್ ಮಾಡಬೇಕು. ಈ ಚಿತ್ರಕ್ಕೆ ಸಪೋರ್ಟ್ ಮಾಡುವುದರಿಂದ ಕೇವಲ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಮಾತ್ರ ಉಳಿಯಲ್ಲ. ಬದಲಾಗಿ ಈ ಕಲೆಗೆ ಸಂಬಂಧಪಟ್ಟ ಅದೆಷ್ಟೋ ಕಲೆಗಳು ಉಳಿದುಕೊಳ್ಳುತ್ತವೆ ಎಂದು ಹೇಳಿದ್ದಾರೆ.