ಬಾಲಿವುಡ್‌ನ ಜನಪ್ರಿಯ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಮುದ್ದಾದ ಹೆಣ್ಣುಮಗಳಿಗೆ ‘ಸರಾಯಾಹ್’ ಎಂದು ಹೆಸರಿಟ್ಟಿದ್ದಾರೆ. ಮಗಳ ಕಾಲುಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಹೆಸರಿನ ಅರ್ಥವೇನು?
ಸರಾಯಾಹ್ ಎಂಬ ಹೆಸರು ಹೀಬ್ರೂ ಭಾಷೆಯಿಂದ ಬಂದಿದ್ದು, ಇದರ ಅರ್ಥ ‘ದೈವಿಕ ರಾಜಕುಮಾರಿ’ ಅಥವಾ ʻರಾಜಕುಮಾರಿ’ ಎಂದಿದೆ. ಮಗಳ ಕಾಲು ಫೋಟೋವನ್ನು ಹಂಚಿಕೊಂಡಿರುವ ಕಿಯಾರಾ ಮತ್ತು ಸಿದ್ದಾರ್ಥ್, “ನಮ್ಮ ಪ್ರಾರ್ಥನೆಗಳಿಂದ, ನಮ್ಮ ತೋಳುಗಳವರೆಗೆ.. ನಮ್ಮ ದೈವಿಕ ಆಶೀರ್ವಾದ, ನಮ್ಮ ರಾಜಕುಮಾರಿ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಫೋಟೋ ಹಂಚಿಕೊಂಡ ಒಂದು ಗಂಟೆಯೊಳಗೆ 6.25 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು, “ನನ್ನ ಪ್ರೀತಿ ಮತ್ತು ಆಶೀರ್ವಾದಗಳು ಯಾವಾಗಲೂ ಇರಲಿ….” ಎಂದು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಬಾಲಿವುಡ್‌ನ ವರುಣ್ ಧವನ್, ಶಿಲ್ಪಾ ಶೆಟ್ಟಿ, ಆಮಿ ಜಾಕ್ಸನ್, ಭೂಮಿ ಪೆಡ್ನೇಕರ್, ಸಂಜಯ್ ಕಪೂರ್, ಆಥಿಯ ಶೆಟ್ಟಿ, ಪತ್ರಲೇಖಾ, ನಿಕಿತಿನ್ ಧೀರ್, ಮನೀಶ್ ಮಲ್ಹೋತ್ರಾ ಮುಂತಾದ ಸೆಲೆಬ್ರಿಟಿಗಳು ಶುಭ ಹಾರೈಸಿದ್ಧಾರೆ.
ಇದನ್ನೂ ಓದಿ : ದಾಳಿಗೆ ಯತ್ನಿಸಿದ ಹುಲಿ ಸೆರೆ | ನಿಟ್ಟುಸಿರು ಬಿಟ್ಟ ಇಬ್ಬರು ರೈತರು


















