ಕಿಯಾ ಮೋಟಾರ್ಸ್ ತನ್ನ ಹೊಸ ಸೈರೋಸ್ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಭಾರತದಲ್ಲಿ ₹9 ಲಕ್ಷ (ಎಕ್ಸ್-ಶೋರೂಮ್) ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಬೆಲೆ HTK ಪೆಟ್ರೋಲ್ ಮ್ಯಾನುಯಲ್ ವೇರಿಯೆಂಟ್‌ನದ್ದು. ಟಾಪ್-ಸ್ಪೆಕ್ ಡೀಸೆಲ್- AT ADAS ವೇರಿಯಂಟ್ ₹17.80 ಲಕ್ಷ ರೂಪಾಯಿ ಬೆಲೆ ಹೊಂದಿದೆ. ಕಿಯಾ ಜನವರಿ 3 ರಿಂದ ₹25,000 ಟೋಕನ್ ಅಮೌಂಟ್‌ನೊಂದಿಗೆ ಮುಂಗಡ ಬುಕ್ಕಿಂಗ್ ಸ್ವೀಕರಿಸುತ್ತಿದೆ. ಫೆಬ್ರುವರಿ ಮಧ್ಯದಲ್ಲಿ ಡೆಲಿವರಿ ಪ್ರಾರಂಭವಾಗಲಿದೆ.
ADAS ಪ್ಯಾಕೇಜ್ ಅನ್ನು HTX+ ಟಾಪ್-ಟ್ರಿಮ್‌ಗಾಗಿ ಕಸ್ಟಮೈಸ್ಡ್ 80,000 ರೂಪಾಯಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಬೆಲೆಗಳ ದೃಷ್ಟಿಯಿಂದ, ಸೈರೋಸ್ ಸೋನೆಟ್ ಮತ್ತು ಸೆಲ್ಟೋಸ್ ಮಧ್ಯದ ಸ್ಥಾನ ತುಂಬಲಿದೆ. ಸೋನೆಟ್ ಪೆಟ್ರೋಲ್ ₹8 ಲಕ್ಷದಿಂದ ₹14.95 ಲಕ್ಷದವರೆಗೆ, ಸೆಲ್ಟೋಸ್ ಪೆಟ್ರೋಲ್ ₹11.13 ಲಕ್ಷದಿಂದ ₹20.51 ಲಕ್ಷದವರೆಗೆ ಇದೆ. ಸೋನೆಟ್ ಡೀಸೆಲ್ ₹10 ಲಕ್ಷದಿಂದ ₹15.70 ಲಕ್ಷದವರೆಗೆ ಬೆಲೆ ಹೊಂದಿದ್ದರೆ ಸೆಲ್ಟೋಸ್ ಡೀಸೆಲ್ ₹12.71 ಲಕ್ಷದಿಂದ ₹20.51 ಲಕ್ಷದವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸೈರೋಸ್ ವಿನ್ಯಾಸ ಹೇಗಿದೆ?
ಸೈರೋಸ್ ವಿನ್ಯಾಸ EV9 ಮತ್ತು EV3 ಮುಂತಾದ ಗ್ಲೋಬಲ್ ಕಿಯಾ ಎಸ್‌ಯುವಿಗಳಿಂದ ಪ್ರೇರಿತಗೊಂಡಿದೆ. ಈ ಕಾರು 4 ಮೀಟರ್‌ನ ಒಳಗೆ ಇದ್ದರೂ, ಟಾಲ್‌ಬಾಯ್ ಎಸ್‌ಯುವಿ (Tallboy SUV) ವಿನ್ಯಾಸ ಹೊಂದಿದೆ. ಮುಂಭಾಗವು ವಿಶೇಷವಾಗಿ ಲೋ-ಸೆಟ್ ಎಲ್‌ಇಡಿ ಹೆಡ್‌ಲೈಟ್ ಮತ್ತು ಫೆಂಡರ್ ವಿನ್ಯಾಸದೊಂದಿಗೆ ವಿಶಿಷ್ಟವಾಗಿದೆ. 17-ಇಂಚಿನ ಟ್ರೈ-ಪೆಟಲ್ ಅಲಾಯ್ ವೀಲ್ಸ್ ಟಾಪ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ. ಬಾಡಿ-ಕಲರ್ B-ಪಿಲ್ಲರ್, ಕಪ್ಪು ಬಣ್ಣದ A, C, D ಪಿಲ್ಲರ್, ಫ್ಲಶ್ ಡೋರ್ ಹ್ಯಾಂಡಲ್, ಹೈ ಮೌಂಟೆಡ್ ಎಲ್-ಆಕಾರದ ಟೈಲ್ ಲ್ಯಾಂಪ್ಸ್ ಮತ್ತು ಟು ಟೋನ್ ಬಂಪರ್ ಆಕರ್ಷಣೀಯವಾಗಿದೆ.
ಕಿಯಾ ಸೈರೋಸ್ ಎಂಟು ಬಣ್ಣಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಅರೋರಾ ಬ್ಲಾಕ್ ಪರ್ಲ್, ಫ್ರೋಸ್ಟ್ ಬ್ಲೂ, ಗ್ಲೇಶಿಯರ್ ವೈಟ್ ಪರ್ಲ್ , ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಪ್ಯೂಟರ್ ಆಲಿವ್ ಮತ್ತು ಸ್ಪಾರ್ಕ್ಲಿಂಗ್ ಸಿಲ್ವರ್.
ಇಂಟೀರಿಯರ್ ಡಿಸೈನ್
ಕಾರಿನ ಒಳಾಂಗಣದಲ್ಲಿ ಸರಳ ಮತ್ತು ಆಧುನಿಕ ವಿನ್ಯಾಸ ಹೊಂದಿದ್ದು, ಮಧ್ಯ ಭಾಗದಲ್ಲಿ ಎರಡು 12.3-ಇಂಚುಗಳ ಡಿಸ್‌ಪ್ಲೇಗಳು ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಜೊತೆಗೆ 5-ಇಂಚಿನ ಕ್ಲೈಮೇಟ್ ಕಂಟ್ರೋಲ್ ಡಿಸ್‌ಪ್ಲೇ ಇದೆ. 2-ಸ್ಪೋಕ್ ಸ್ಟೀರಿಂಗ್ ವೀಲ್‌ನಲ್ಲಿರುವ ಆಫ್ ಸೆಂಟರ್ ಕಿಯಾ ಲೋಗೋ, ಎಲ್ಲಾ ನಾಲ್ಕು ಸೀಟ್‌ಗಳಿಗೆ ವಿಂಟಿಲೇಶನ್, ಅಂಬಿಯಂಟ್ ಲೈಟಿಂಗ್, ಪ್ಯಾನೊರಾಮಿಕ್ ಸನ್‌ರೂಫ್, ಪವರ್ ಡ್ರೈವರ್ ಸೀಟ್ ಕೊಡಲಾಗಿದೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 60:40 ಸ್ಕೀಟಿಂಗ್ & ರಿಕ್ಲೈನಿಂಗ್ ಸೆಕಂಡ್-ರೋ ಸೀಟುಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ & ಆಪಲ್ ಕಾರ್‌ಪ್ಲೇ ಮತ್ತು 8-ಸ್ಪೀಕರ್ ಹಾರ್ಮನ್ ಕಾರ್ಡಾನ್ ಸೌಂಡ್ ಸಿಸ್ಟಮ್ ಈ ಕಾರಿನಲ್ಲಿದೆ.
ಸುರಕ್ಷತಾ ಫೀಚರ್‌ಗಳು
ಸುರಕ್ಷತೆಗೆ ಸಂಬಂಧಿಸಿದಂತೆ ಹೇಳುವುದಾದರೆ ಕಿಯಾ ಸೈರೋಸ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗ ಪಾರ್ಕಿಂಗ್ ಸೆನ್ಸಾರ್‌ಗಳು, 360-ಡಿಗ್ರೀ ಕ್ಯಾಮೆರಾ, ಮತ್ತು ಲೆವೆಲ್ 2 ಅಡಾಸ್ ಒಳಗೊಂಡಿದೆ.
ಎಂಜಿನ್ ಆಯ್ಕೆಗಳು
ಸೈರೋಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.0L 3-ಸಿಲಿಂಡರ್ ಟರ್ಬೋ-ಪೆಟ್ರೋಲ್ ಎಂಜಿನ್ 120hp ಶಕ್ತಿ ಮತ್ತು 172Nm ಟಾರ್ಕ್ ಉತ್ಪಾದಿಸುತ್ತದೆ, 6-ಸ್ಪೀಡ್ ಮ್ಯಾನುಯಲ್ ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆಗಳಿವೆ. 1.5L 4-ಸಿಲಿಂಡರ್ ಡೀಸೆಲ್ ಎಂಜಿನ್ 116hp ಶಕ್ತಿ ಮತ್ತು 250Nm ಟಾರ್ಕ್ ಹೊಂದಿದ್ದು, 6-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್‌ಗಳು ಲಭ್ಯವಿದೆ.
ಕಿಯಾ ಸೈರೋಸ್ ಎಸ್‌ಯುವಿ ವಿನ್ಯಾಸ, ಆಧುನಿಕ ಇಂಟೀರಿಯರ್ , ಅತ್ಯಾಧುನಿಕ ಫೀಚರ್‌ಗಳು , ಮತ್ತು ಅತ್ಯುತ್ತಮ ಪವರ್‌ಟ್ರೈನ್ ಆಯ್ಕೆಗಳನ್ನು ಹೊಂದಿದ್ದು, ಸೋನೆಟ್ ಮತ್ತು ಸೆಲ್ಟೋಸ್ ನಡುವಿನ ಪರ್ಯಾಯವಾಗಿದೆ.