ರಾಯಚೂರು: ಹಾಡಹಗಲೇ ರೈತರೊಬ್ಬರಿಂದ ಖದೀಮರು 7 ಲಕ್ಷ ರೂ. ಲೂಟಿ ಮಾಡಿರುವ ಘಟನೆ ನಡೆದಿದೆ.
ಬ್ಯಾಂಕ್ ನಿಂದ ಡ್ರಾ ಮಾಡಿಕೊಂಡ ಹಣ್ಣು ಖರೀದಿಸಲು ಹೋಗಿದ್ದ ರೈತನ ಬೈಕ್‌ನಿಂದ ಖದೀಮರು 7 ಲಕ್ಷ ರೂ. ಎಗರಿಸಿದ್ದಾರೆ. ಈ ಘಟನೆ ಜಿಲ್ಲೆಯ (Raichuru) ದೇವದುರ್ಗ ತಾಲ್ಲೂಕಿನ ಗಬ್ಬೂರಿನಲ್ಲಿ ನಡೆದಿದೆ.
ಶ್ರೀನಿವಾಸ ರಾವ್ ಎಂಬುವವರು ಹಣ ಕಳೆದುಕೊಂಡ ರೈತ. ಕಳ್ಳತನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೈತ ಶ್ರೀನಿವಾಸ್ ಅವರು ಮೆಣಸಿನಕಾಯಿ ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕ್ ನಿಂದ ಡ್ರಾ ಮಾಡಿಕೊಂಡಿದ್ದರು. ಈ ವೇಳೆ ಹಣವನ್ನು ಬೈಕ್‌ನಲ್ಲಿಯೇ ಬಿಟ್ಟು ಹಣ್ಣು ಖರೀದಿಸಲು ಹೋಗಿದ್ದರು. ಇದನ್ನು ಗಮನಿಸಿದ ಖದೀಮರು, 7 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
ರೈತ ಶ್ರೀನಿವಾಸ್ ಹಣ ಡ್ರಾ ಮಾಡಿಕೊಂಡು, ಬರುವುದನ್ನು ಗಮನಿಸಿಯೇ ಈ ಕೃತ್ಯ ಎಸಗಿರಬಹುದು ಎಂದು ತಿಳಿದು ಬಂದಿದೆ. ಈ ಕುರಿತು ರೈತ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.