ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಕಳ್ಳತನದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಕೆ.ಆರ್. ಪುರಂನಲ್ಲಿ ದರೋಡೆ ಗ್ಯಾಂಗ್ ವೊಂದು ಪ್ರತ್ಯಕ್ಷವಾಗಿದ್ದು ಮಧ್ಯರಾತ್ರಿ ರಾಜಾರೋಷವಾಗಿ ಸರಣಿ ದರೋಡೆ ಮಾಡಿದೆ.
ಮಧ್ಯರಾತ್ರಿ 2.30ರ ವೇಳೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮೂವರು ಕಿತ್ತಗನೂರಿನಲ್ಲಿ ಕಳ್ಳತನ ಮಾಡಿದ್ದಾರೆ. ಕೆಆರ್ ಪುರಂ ಸುತ್ತಮುತ್ತ ಈ ಖದೀಮರು, ಕಳೆದ 15 ದಿನಗಳಲ್ಲಿ 20ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ.
ಈ ಗ್ಯಾಂಗ್ ಮಾಸ್ಕ್ ಹಾಕಿಕೊಂಡು ಒಳ ನುಗ್ಗುತ್ತದೆ. ಪಕ್ಕಾ ಸಿನಿಮಾ ಶೈಲಿಯಲ್ಲಿ ಬಾಗಿಲು, ಲಾಕ್ ಮುರಿದು ಚಿನ್ನಾಭರಣ, ಹಣ ಲೂಟಿ ಮಾಡಿದ್ದಾರೆ. ಈ ಗ್ಯಾಂಗ್ ನ ಹಾವಳಿಗೆ ಈಗ ಕಿತ್ತಗನೂರು, ಟಿಸಿ ಪಾಳ್ಯ, ಆವಲಹಳ್ಳಿ ಜನರು ಆತಂಕಕ್ಕೊಳಗಾಗಿದ್ದಾರೆ.