ಹೊಸ ವರ್ಷದ ಪಾರ್ಟಿ ಮಾಡಲು ಖದೀಮರು ಬೆಡ್ ಶೀಟ್ ಕದ್ದಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ಖದೀಮರು ಬೆಡ್ ಶೀಟ್ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಮುಂದೆ ಒಣಗಿಸಲು ಹಾಕಿದ್ದ ಬೇಡ್ ಶೀಟ್ ಗಳನ್ನು ಖದೀಮರು ಹೊತ್ತೊಯ್ದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಘವೇಂದ್ರಸ್ವಾಮಿ ಎನ್ನುವವರ ಮನೆ ಮುಂದೆ ಒಣಗಲು ಹಾಕಿದ್ದ ಬೆಡ್ ಶೀಟ್ ಗಳನ್ನು ಇಬ್ಬರು ಖದೀಮರು ಎಗರಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಡ್ ಶೀಟ್ ಗಳನ್ನು ಕಳ್ಳತನ ಮಾಡಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.