ಬೆಂಗಳೂರು : ಎಲ್ಲ ಲಾಭಗಳ ಲೆಕ್ಕಾಚಾರಗಳನ್ನು ಮೀರಿ ಮಾನವೀಯತೆಯ ಮಹೋನ್ನತ ಮೌಲ್ಯವೊಂದು ಅನಾವರಣಗೊಳ್ಳುತ್ತಿದೆ. ತಮ್ಮ ವೈಯಕ್ತಿಕ ಸಂಪಾದನೆಯಿಂದ 400 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ವಿನಿಯೋಗಿಸಿ, ಚಿಕ್ಕಪೇಟೆ ಕ್ಷೇತ್ರದ 10,000 ನಿರ್ಗತಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ಬೃಹತ್ ಲೋಕೋಪಕಾರಿ ಯೋಜನೆಗೆ ಉದ್ಯಮಿ ಮತ್ತಿ ಅಫ್ನಾನ್ ಕನ್ಸ್ಟ್ರಕ್ಶನ್ ನ ಮುಖ್ಯಸ್ಥ ಕೆಜಿಎಫ್ ಬಾಬು ಮುಂದಾಗಿದ್ದಾರೆ.
ಅವರ ತಾಯಿಯವರ ಕನಸಿಗೆ ಮಗನೊಬ್ಬನು ಸಲ್ಲಿಸುತ್ತಿರುವ ನಮನವಾಗಿದೆ. “ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿಗೆ ನಿಜವಾದ ಅರ್ಥ ಸಿಗುವುದು ಅದು ಸಮಾಜದ ಬಡವರ ಸೇವೆಗೆ ಬಳಕೆಯಾದಾಗ, ಎಂಬ ದೃಢ ನಂಬಿಕೆ ಹೊಂದಿ ಕೆಜಿಎಫ್ ಬಾಬು, ಈ ಸಮಾಜ ಸೇವಾ ಯೋಜನೆಯ ಹಿಂದಿನ ಪ್ರೇರಣೆ ತಮ್ಮ ತಾಯಿಯವರೇ ಎಂದು ಹೇಳುತ್ತಾರೆ.
ಈ ಸಂಬಂಧಿಸಿದಂತೆ ಮಾತನಾಡಿದ ಕೆ.ಜಿ.ಎಫ್ ಬಾಬು, ಈ ಯೋಜನೆಯ ಸಂಪೂರ್ಣ 400 ಕೋಟಿ ರೂಪಾಯಿ ವೆಚ್ಚವನ್ನು ಕಾನೂನುಬದ್ಧವಾಗಿಯೇ ಮಾಡುತ್ತಿದ್ದು, ತೆರಿಗೆ ಪಾವತಿಸಿದ ವೈಯಕ್ತಿಕ ಆದಾಯದಿಂದಲೇ ಭರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು, ಈ ಜನೋಪಕಾರಿ ವೆಚ್ಚದ ಬಗ್ಗೆ ಮಾಹಿತಿ ನೀಡಲಾಗಿದೆ. ಸಾರ್ಥಕ ಸೇವೆಗೆ ಸರ್ಕಾರದ ಸಹಕಾರದ ನಿರೀಕ್ಷೆಯಿದೆ. ಈ ಮಹತ್ಕಾರ್ಯವನ್ನು ಸಾಕಾರಗೊಳಿಸಲು ಸರ್ಕಾರದ ಬೆಂಬಲ ಅತ್ಯಗತ್ಯ. ಆದ್ದರಿಂದ ಸೂಕ್ತ ಜಾಗದ ಗುರುತಿಸುವಿಕೆಯಿಂದ ಹಿಡಿದು, ಮನೆಗಳಿಗೆ ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವವರೆಗೆ ವಿವಿಧ ಸರ್ಕಾರಿ ಇಲಾಖೆಗಳ ಸಹಕಾರವನ್ನು ಕೋರಿ ಅವರು ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.