ಬೆಂಗಳೂರು: ರಾಜ್ಯದ ಜನರಿಗೆ ಕೆಇಆರ್ ಸಿ ಕರೆಂಟ್ ಶಾಕ್ ನೀಡಿದೆ. ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿದೆ.
ವಿದ್ಯತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿಗಳ ಪಿಂಚಿಣಿ ಹಾಗೂ ಗ್ರಾಚ್ಯುಟಿ ಗ್ರಾಹಕರಿಂದಲೇ ವಸೂಲಿಗೆ 36 ಪೈಸೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಹೊಸ ಆದೇಶ ಎಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ ಎನ್ನಲಾಗಿದೆ.
ಅಲ್ಲದೇ, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕೂಡ ದರ ಏರಿಕೆಯ ಕುರಿತು ಆದೇಶ ಹೊರಡಿಸಲಾಗಿದೆ.
ಮುಂದೆ ಏರಿಕೆಯಾಗಲಿರುವ ದರ ಎಷ್ಟು?
2025-26 ರಲ್ಲಿ 36 ಪೈಸೆ
2026-27 ರಲ್ಲಿ 35 ಪೈಸೆ
2027-28 ರಲ್ಲಿ 34 ಪೈಸೆ ಹೆಚ್ಚುವರಿಯಾಗಿ ವಿಧಿಸಲು ಆದೇಶ ಹೊರಡಿಸಲಾಗಿದೆ.
ಈ ದರ ಹೆಚ್ಚಳದಿಂದಾಗಿ ಮುಂದಿನ ಮೂರು ವರ್ಷದಲ್ಲಿ 8,519 ಕೋಟಿ ರೂ. ಹೆಚ್ಚುವರಿ ಹಣ ಇಲಾಖೆಗೆ ಹರಿದು ಬರಲಿದೆ. ಈಗಾಗಲೇ 4,659 ಕೋಟಿ ಪಿಂಚಿಣಿ- ಗ್ರಾಚ್ಯುಟಿ ಹಿಂಬಾಕಿಯನ್ನು ಸಂಸ್ಥೆಗಳು ಉಳಿಸಿಕೊಂಡಿದ್ದು, ಇದರ ಹೊರೆಯನ್ನು ಈಗ ಗ್ರಾಹಕರ ಮೇಲೆ ಹಾಕಲಾಗುತ್ತಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗುವಂತಾಗಿದೆ.