ಆನೇಕಲ್ : ಕುಖ್ಯಾತ ಅಂತಾರಾಜ್ಯ ಡ್ರಗ್ ಪೆಡ್ಲರ್ನ್ನು ಕೇರಳ ಪೊಲೀಸರು ಭರ್ಜರಿ ಬೇಟೆ ನಡೆಸಿ ಬೆಂಗಳೂರಲ್ಲಿ ಬಂಧಿಸಿದ್ದಾರೆ. ಕೇರಳದ ಮಾದಕವಸ್ತು ನಿಗ್ರಹ ದಳದಿಂದ ಕಾರ್ಯಾಚರಣೆ ನಡೆಸಿದ್ದು, ಅಸ್ಸಾಂ ಮೂಲದ ಪೆಡ್ಲರ್ ಧೀರೇಶ್ ಕುಟುಮ್(27)ರನ್ನು ಬಂಧಿಸಲಾಗಿದೆ.
ಬಂಧಿತನಿಂದ 1 ಕೋಟಿ ರೂ ಮೌಲ್ಯದ ಎಂಡಿಎಂಎ ಡ್ರಗ್ಸ್ ಸೀಜ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಒಟ್ಟು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ಧೀರೇಶ್ ತಂಗಿಯ ಪತಿ ನೈಜೀರಿಯಾ ಮೂಲದವನು. ಆತನ ಮೂಲಕ ಅಸ್ಸಾಂಗೆ ಎಂಡಿಎಂಎ ರವಾನಿಸುತ್ತಿದ್ದ. ಅಸ್ಸಾಂನಲ್ಲಿರುವ ತಂಗಿ ಮೂಲಕ ಕೇರಳ ಮತ್ತು ಕರ್ನಾಟಕಕ್ಕೆ ಸಾಗಟ ಮಾಡಲಾಗುತ್ತಿತ್ತು. ಸೆರೆಲಾಕ್ ಪಾಕೆಟ್ಗಳಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆನ್ಲೈನ್ ಫುಡ್ ಡೆಲಿವರಿ ಬಾಯ್ ರೀತಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದ ರಮೇಶ್ ರೆಡ್ಡಿ ಬಡಾವಣೆಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿದ ಕೇರಳ ಪೊಲೀಸರಿಗೆ 15ಕ್ಕೂ ಹೆಚ್ಚು ಖಾಲಿಯಾದ ಸೆರೆಲಾಕ್ ಪಾಕೆಟ್ಗಳು ಪತ್ತೆ ಆಗಿವೆ. ಅವುಗಳನ್ನೆಲ್ಲ ಈಗ ಪೊಲೀಸರು ಜಪ್ತಿ ಮಾಡಿದ್ದಾರೆ.
ಇನ್ನು ವಾರದ ಹಿಂದೆ 1 ಕೆಜಿ ಎಂಡಿಎಂಎ ಸಹಿತ ಕೇರಳದ ಮಲಪುರಂನಲ್ಲಿ ಧೀರೇಶ್ ಸಹಚರರು ಸಿಕ್ಕಿಬಿದ್ದಿದ್ದರು. ಒಟ್ಟು 8 ಆರೋಪಿಗಳನ್ನು ಸೆರೆ ಹಿಡಿದಿದ್ದರು. ವಿಚಾರಣೆ ವೇಳೆ ಕಿಂಗ್ಪಿನ್ ಧೀರೇಶ್ ಕುಟುಮ್ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಇದೀಗ ಪೊಲೀಸರು ಕಿಂಗ್ಪಿನ್ ಧೀರೇಶ್ ಕುಟುಮ್ ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ | ಕೇಂದ್ರ ಸಚಿವ ವಿ.ಸೋಮಣ್ಣ



















