ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ನಡುವೆಯೇ ನಟ ಧ್ರುವ ಸರ್ಜಾ ಫ್ಯಾನಸ್ಸಸಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನಿರ್ದೇಶಕ ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಜೋಡಿಯ ಬಹುನಿರೀಕ್ಷಿತ ಕೆಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದು, ಇದರ ಜೊತೆಗೆ ಕಿಚ್ಚು ಹಚ್ಚುವಂತಹ ಹೊಸ ಹಾಡೊಂದು ಬಿಡುಗಡೆಯಾಗಿದೆ.
ಚಿತ್ರತಂಡವು 2026ರ ಏಪ್ರಿಲ್ 30 ರಂದು ಕೆಡಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ. ಇಂದು (ಡಿ.26) ರಿಲೀಸ್ ಆಗಿರುವ ಹೊಸ ಹಾಡಿನೊಂದಿಗೆ ಸೈಲೆಂಟ್ ಆಗಿಯೇ ಸಿನಿಮಾ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ ಕೆಡಿ ಟೀಮ್. ಅಲ್ಲಿಗೆ ಈ ಚಿತ್ರ ತೆರೆಗೆ ಬರಲು ಅಭಿಮಾನಿಗಳು ಇನ್ನೂ 4 ತಿಂಗಳು ಕಾಯಬೇಕಿದೆ.

ಸದ್ಯ ಈಗ ರಿಲೀಸ್ ಆಗಿರುವ ‘ಅಣ್ತಮ್ಮ ಜೋಡೆತ್ತು’ ಹಾಡು ಜೋಗಿ ಪ್ರೇಮ್ ಅವರ ಕಂಠದಲ್ಲಿ ಮೂಡಿಬಂದಿದ್ದು, ಸದ್ಯ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ತಾಯಿ ಸೆಂಟಿಮೆಂಟ್ ಹಾಡುಗಳು ಮೂಲಕ ಕಮಾಲ್ ಮಾಡಿದ್ದ ಪ್ರೇಮ್, ಈಗ ಅಣ್ಣ-ತಮ್ಮಂದಿರ ಬಾಂಧವ್ಯವನ್ನು ಈ ಹಾಡಿನ ಮೂಲಕ ಸಾರಿದ್ದಾರೆ. ಮಂಜುನಾಥ್ ಬಿ.ಎಸ್. ಅವರ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಹಾಡನ್ನು ವಿವಿಧ ಭಾಷೆಯಲ್ಲಿ ಬೇರೆ ಬೇರೆ ಗಾಯಕರು ಹಾಡಿದ್ದಾರೆ.
ಕೆವಿಎನ್ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ಹಾಡಿಗೆ ಪ್ರೇಮ್ ಧ್ವನಿ ನೀಡಿದ್ದರೆ, ಹಿಂದಿಯಲ್ಲಿ ಜಾವೇದ್ ಅಲಿ, ತೆಲುಗು ಮತ್ತು ತಮಿಳಿನಲ್ಲಿ ಸಿದ್ ಶ್ರೀರಾಮ್ ಹಾಗೂ ಮಲಯಾಳಂನಲ್ಲಿ ವಿಜಯ್ ಅವರ ಧ್ವನಿಯಲ್ಲಿ ಈ ಹಾಡು ಹೊರಬಂದಿದೆ. ಈಗಾಗಲೇ ‘ಶಿವ ಶಿವ’ ಮತ್ತು ‘ಸೆಟ್ಟಗಲ್ಲಾ ಹೋಗೆ’ ಹಾಡುಗಳ ಮೂಲಕ ಸದ್ದು ಮಾಡಿದ್ದ ಕೆಡಿ ಚಿತ್ರತಂಡ, ಈಗ ಈ ಮೂರನೇ ಹಾಡಿನ ಮೂಲಕ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ : ದೊಡ್ಮನೆಗೆ ಎಂಟ್ರಿ ಕೊಟ್ರು ಮಾಳು ಕ್ಯೂಟ್ ಫ್ಯಾಮಿಲಿ | ಅಪ್ಪನಂತೆ ಹೇರ್‌ಕಟ್ ಮಾಡಿದ ಮಕ್ಕಳು



















