ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕಿನಲ್ಲಿ 75 ಹುದ್ದೆಗಳು (KBL Recruitment 2025) ಖಾಲಿ ಇದ್ದು, ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ. ಆಫೀಸರ್ ಸ್ಕೇಲ್ I ಹುದ್ದೆಗಳಿಗಾಗಿ ಮಾರ್ಚ್ 20ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಂಗಳವಾರ ಕೊನೆಯ ದಿನವಾಗಿದೆ. ಹಾಗಾಗಿ, ಅಭ್ಯರ್ಥಿಗಳು ತುರ್ತಾಗಿ ಅರ್ಜಿ ಸಲ್ಲಿಸಿ, ಬ್ಯಾಂಕಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ www.karnatakabank.com ವೆಬ್ ಪೋರ್ಟಲ್ ಗೆ ಭೇಟಿ ಕೊಡಬಹುದಾಗಿದೆ.
ಸಂಸ್ಥೆ ಹೆಸರು: ಕರ್ಣಾಟಕ ಬ್ಯಾಂಕ್ ಲಿಮಿಟೆಡ್
ಹುದ್ದೆಗಳ ಹೆಸರು: ಆಫೀಸರ್ ಸ್ಕೇಲ್- I
ಹುದ್ದೆಗಳ ಸಂಖ್ಯೆ: 75
ಶೈಕ್ಷಣಿಕ ಅರ್ಹತೆ ಏನು?
ಆಫೀಸರ್ ಸ್ಕೇಲ್- I ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ, ಎಂಸಿಎ, ಎಂಬಿಎ, ಎಲ್ ಎಲ್ ಎಂ ಅಥವಾ ಸಿಎ ಪರೀಕ್ಷೆಯನ್ನು ಪಾಸ್ ಮಾಡಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನದಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 48,480 ರೂಪಾಯಿಯಿಂದ 85,920 ರೂ. ಸಂಬಳ ಇರಲಿದೆ.
ಅರ್ಜಿ ಸಲ್ಲಿಕೆ ಹೇಗೆ?
- ಮೊದಲಿಗೆ ಅಭ್ಯರ್ಥಿಗಳು www.karnatakabank.com ಭೇಟಿ ನೀಡಬೇಕು
- ಎಕ್ಸಾಮ್, ರಿಕ್ರ್ಯೂಟ್ ಮೆಂಟ್, ಕರಿಯರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು
- ನೋಟಿಫಿಕೇಶನ್ ಲಿಂಕ್ ಓಪನ್ ಮಾಡಿದ ಮೇಲೆ, ಎಲ್ಲ ನಿಯಮಗಳನ್ನು ಓದಬೇಕು
- ಆನ್ ಲೈನ್ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಬೇಕು