ಬಿಗ್ ಬಾಸ್ ಕನ್ನಡ 12ರ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ ವಯಸ್ಸಿನ ಬಗ್ಗೆ ಕಾವ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವ್ಯಾ ಮತ್ತು ಸ್ಪಂದನಾ ನಡುವಿನ ಚರ್ಚೆಯಲ್ಲಿ, ರಕ್ಷಿತಾ ತನ್ನ ವಯಸ್ಸನ್ನು ಉಪಯೋಗಿಸಿಕೊಂಡು ಅನುಕೂಲ ಪಡೆಯುತ್ತಿದ್ದಾರೆಂದು ಕಾವ್ಯಾ ಆರೋಪಿಸಿದ್ದಾರೆ.ಈ ವಿಚಾರ ವಾರಾಂತ್ಯದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ.
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಬಗ್ಗೆ ಸ್ಪಂದನಾ ಹಾಗೂ ಕಾವ್ಯ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಸೇಫ್ ತಂಡದಿಂದ ಒಬ್ಬರನ್ನ ನಾಮಿನೇಟ್ ಮಾಡಿ, ನಾಮಿನೇಟೆಡ್ ತಂಡದಿಂದ ಒಬ್ಬರನ್ನ ಸೇಫ್ ಮಾಡುವಂತೆ ʻಬಿಗ್ ಬಾಸ್ʼ ನಾಮಿನೇಟೆಡ್ ತಂಡಕ್ಕೆ ಸೂಚಿಸಿದ್ದರು.
ಅಭಿಷೇಕ್ ಅವರನ್ನ ಸೇವ್ ಮಾಡುವ ಭರದಲ್ಲಿ ರಕ್ಷಿತಾ ಶೆಟ್ಟಿ ರಘು ಅವರನ್ನ ನಾಮಿನೇಟ್ ಮಾಡಿದ್ದರು. ಇದರಿಂದ ರಕ್ಷಿತಾ ಶೆಟ್ಟಿ ನೆಗೆಟಿವ್ ಆಗಿ ಕಾಣಿಸಿಕೊಂಡರು. ಇದಾದ ಬಳಿಕ ಕಾವ್ಯ ಅವರು ಬುದ್ಧಿವಾದ ಹೇಳಿದ್ದರು. ಕಾವ್ಯ ಅವರು ವೀಕ್ಷಕರಿಂದ ಭೇಷ್ ಕೂಡ ಅನಿಸಿಕೊಂಡಿದ್ದರು. ಆದರೆ ನಿನ್ನೆಯ ಎಪಿಸೋಡ್ ಕಂಡು ಕಾವ್ಯ ಅವರಿಗೆ ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
‘ತಪ್ಪು ನಿರ್ಧಾರ ತೆಗೆದುಕೊಂಡಾಗ ಪ್ರಬುದ್ಧತೆ ಇಲ್ಲ ಪಾಪ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅವಳು ಸರಿಯಾದ ನಿರ್ಧಾರ ತೆಗೆದುಕೊಂಡಾಗ ಚಿಕ್ಕವಳಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಳು ಎಂದು ಆಗುತ್ತಿದೆ. ಈ ಕಾರಣಕ್ಕೆ ಅವಳು ಯಾರ ಬಳಿಯೂ ವಯಸ್ಸು ಹೇಳುತ್ತಾ ಇರಲಿಲ್ಲ. ಸುದೀಪ್ ಅವರು ಕೇಳಿದ ಮೇಲೆ ವಯಸ್ಸು ಹೇಳಿದಳು’ ಎಂದಿದ್ದಾರೆ ಕಾವ್ಯಾ.
‘ಎಲ್ಲಾ ಪರಿಸ್ಥಿತಿಗಳು ಅವಳ ಪರವಾಗಿಯೇ ಇದೆ’ ಎಂದರು ಕಾವ್ಯಾ. ‘ಅವಳು ಸ್ಟ್ರೆಟಜಿ ಮಾಡುತ್ತಿಲ್ಲ, ಹೊರಗೆ ಇರುವ ರೀತಿಯೇ ಇದ್ದಾಳೆ ಎಂದರೆ ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ’ ಎಂದು ಸ್ಪಂದನಾ ಹೇಳಿದರು. ಈ ವಿಷಯ ವೀಕೆಂಡ್ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ.
ರಕ್ಷಿತಾ ಶೆಟ್ಟಿ ಅವರು ಈ ವಾರ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ರಘುನ ನಾಮಿನೇಟ್ ಮಾಡಬೇಕು ಎಂದು ಹಠ ಹಿಡಿದರು. ಆ ಬಳಿಕ ಇದು ತಪ್ಪು ನಿರ್ಧಾರ ಎಂಬುದು ಅವರಿಗೆ ಅರಿವಾಗಿತ್ತು. ಈ ಅರಿವು ಮಾಡಿಸಿದ್ದು ಕಾವ್ಯಾ ಅವರೇ. ಈ ವಾರ ರಕ್ಷಿತಾ ಸಾಕಷ್ಟು ಎಡವಿದ್ದರು.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಭಾರತೀಯ ಸಿಖ್ ಯಾತ್ರಾರ್ಥಿ ನಾಪತ್ತೆ : ಇಸ್ಲಾಂಗೆ ಮತಾಂತರ, ಸ್ಥಳೀಯನೊಂದಿಗೆ ವಿವಾಹ?



















