ಎರಡು ದಿನಗಳ ಹಿಂದೆಯಷ್ಟೇ ಸರ್ಕಾರ ಬಸ್ ಟಿಕೆಟ್ ದರ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಈಗ ಇದರ ಮಧ್ಯೆ ಸಿಲಿಕಾನ್ ಸಿಟಿಯ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.
KSRTC ಬಸ್ ದರ ಏರಿಕೆ ಮಧ್ಯೆಯೇ ಈಗ ಮತ್ತೊಂದು ದರ ಏರಿಕೆಯ ಶಾಕ್ ಎದುರಾಗಿದೆ. ಈಗ ಖಾಸಗಿ ಶಾಲಾ ಮಕ್ಕಳ ಪೋಷಕರಿಗೆ ಶಾಕ್ ಎದುರಾಗಿದ್ದು, ಶಾಲಾ ಶುಲ್ಕ ಏರಿಕೆ ಮಾಡಲು ಸಂಸ್ಥೆಗಳು ಮುಂದಾಗಿವೆ.
ಖಾಸಗಿ ಶಾಲೆಗಳು ವಿದ್ಯಾರ್ಥಿ ಶುಲ್ಕವನ್ನು ಶೇ. 10 ರಿಂದ 15ರಷ್ಟು ಏರಿಕೆ ಮಾಡಲು ನಿರ್ಧರಿಸಿವೆ. ಇದೇ ಶೈಕ್ಷಣಿಕ ವರ್ಷದಿಂದಲೇ ಶುಲ್ಕ ಹೆಚ್ಚಳ ಮಾಡಲು ಮುಂದಾಗಿವೆ. ಮೂಲಕ ಶಾಲೆಗಳು ಕೂಡ ಪಾಲಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿವೆ.
ಈ ಮೂಲಕ ಬದುಕು ಕಾಸ್ಟಲಿ ಆಗ್ತಿದೆ ಗುರು ಎಂದು ಬೆಂಗಳೂರಿಗರು ಮಾತನಾಡಿಕೊಳ್ಳುವಂತಾಗುತ್ತಿದೆ. ವಿದ್ಯುತ್, ಬಸ್ ದರ ಸೇರಿದಂತೆ ಹಲವು ದರಗಳು ಏರಿಕೆಯಾಗುತ್ತಿವೆ. ಶಿಕ್ಷಕರ ಸಂಬಳವೂ ಏರಿಕೆಯಾಗುತ್ತಿದೆ. ನಾವು ಶಾಲೆ ನಡೆಸಬೇಕು. ಹೀಗಾಗಿ ನಮಗೂ ಶಾಲೆ ನಡೆಸುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಶೇ. 10ರಿಂದ 15ರಷ್ಟು ಶಾಲಾ ಶುಲ್ಕ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಖಾಸಗಿ ಶಾಲಾ ಸಂಸ್ಥೆಗಳು ಹೇಳುತ್ತಿವೆ.