ಬೆಂಗಳೂರು: ಕೆಎಎಸ್ ಮರು ಪರೀಕ್ಷೆಗೆ ದಿನಾಂಕ ನಿದಗಿ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನ್ ಅಡಿಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ 384 ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆಯನ್ನು ಡಿ. 29 ರಂದು ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ಪರೀಕ್ಷೆಯನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಕನ್ನಡ ಭಾಷಾಂತರ ಎಡವಟ್ಟಿನಿಂದ ಕೆಎಎಸ್ ಪರೀಕ್ಷೆ ರದ್ದುಗೊಂಡಿತ್ತು. ಡಿ. 29ರಂದು ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ. ಡಿ.29ರಂದು ಒಂದೇ ದಿನ ಪೇಪರ್-1, ಪೇಪರ್-2 ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಪೇಪರ್-1 ಪರೀಕ್ಷೆ ನಡೆದರೆ, ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ ಪೇಪರ್-2 ಪರೀಕ್ಷೆ ನಡೆಯಲಿದೆ.
ಈಗಾಗಲೇ ಪ್ರಾಥಮಿಕ ಪರೀಕ್ಷೆಗಳನ್ನು ಇದೇ ವರ್ಷ ಆಗಸ್ಟ್ನಲ್ಲಿ ನಡೆಸಲಾಗಿತ್ತು. ಆದರೆ, ಭಾಷಾಂತರದಲ್ಲಿನ ಗೊಂದಲದಿಂದಾಗಿ ಅಭ್ಯರ್ಥಿಗಳು ಮತ್ತೆ ಮರು ಪರೀಕ್ಷೆ ನಡೆಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲಾಗುತ್ತಿದೆ.