ಕಾರವಾರ : ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ ನೀಡಿದ್ದ ಪರವಾನಿಗೆಯನ್ನು ಭಾರತೀಯ ರೀಸರ್ವ್ ಬ್ಯಾಂಕ್ ರದ್ದುಪಡಿಸಿದೆ. ಬ್ಯಾಂಕ್ ನಲ್ಲಿ ಅಗತ್ಯ ಬಂಡವಾಳ ಹಾಗೂ ಗಳಿಕೆಯ ಸಾಧ್ಯತೆಯೂ ಕಡಿಮೆ ಇರುವುದರಿಂದ ಪರವಾನಿಗೆ ರದ್ದುಪಡಿಸಲಾಗಿದೆ ಎಂದು ಆರ್.ಬಿ.ಐ ತಿಳಿಸಿದೆ.
ಬ್ಯಾಂಕ್ ಅನ್ನು ಮುಚ್ಚುವ ಆದೇಶ ಹೊರಡಿಸುವಂತೆ ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್ ಗೆ ಆರ್.ಬಿ.ಐ ಸೂಚಿಸಿದ್ದು, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದೆ.
ಬ್ಯಾಂಕ್ ಅನ್ನು ಮುಚ್ಚುವ ಪ್ರಕ್ರಿಯೆ ಮುಗಿದ ನಂತರ ಠೇವಣಿದಾರರಿಗೆ 5 ಲಕ್ಷದವರೆಗೆ ಠೇವಣಿ ವಿಮೆ ಸಿಗಲಿದ್ದು, ಬ್ಯಾಂಕ್ ನ ಠೇವಣಿದಾರರ ಪೈಕಿ ಶೇ. 92.9ರಷ್ಟು ಜನರು ತಮ್ಮ ಠೇವಣಿಯ ಪೂರ್ಣ ಮೊತ್ತವನ್ನು ವಿಮಾ ಪರಿಹಾರದ ರೂಪದಲ್ಲಿ ಪಡೆಯಲು ಅರ್ಹರಿದ್ದಾರೆ.
ಇನ್ನು, ಪರವಾನಿಗೆ ರದ್ದಾಗಿರುವುದರ ಪರಿಣಾಮ ಈ ಬ್ಯಾಂಕ್ ನ ವಾಹಿವಾಟುಗಳು ಬುಧವಾರದ ನಂತರ ಸ್ಥಗಿತಗೊಂಡಿದೆ.