ಬೆಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಸುಲಭಗೊಳಿಸುತ್ತಿದೆ. ಉದ್ಯೋಗ ಕಳೆದುಕೊಳ್ಳುವ ಭೀತಿಯ ಮಧ್ಯೆಯೂ ಎಐ ಹಲವು ದಿಸೆಯಲ್ಲಿ ಅನುಕೂಲ ಮಾಡಿದೆ. ಇಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರ ದಕ್ಷತೆ ಹೆಚ್ಚಿಸಲು ಬಳಸಿಕೊಳ್ಳಲು ಮುಂದಾಗಿದೆ.
ಹೌದು, ರಾಜ್ಯದಲ್ಲಿ ಇನ್ನು ಸರಕಾರಿ ನೌಕರರ ಹಾಜರಾತಿಯು ಎಐ ಆಧಾರಿತವಾಗಿರಲಿದೆ. ಹಾಜರಾತಿ ವೇಳೆ ಬಯೋಮೆಟ್ರಿಕ್ ಜತೆಗೆ ಫೇಶಿಯಲ್ ನೀಡುವುದು ಕಡ್ಡಾಯವಾಗಲಿದೆ. ಸರ್ಕಾರಿ ನೌಕರರಲ್ಲಿಶಿಸ್ತು ಪಾಲನೆ, ಸಮಯ ಪಾಲನೆ ಸೇರಿ ಹಲವು ದಿಸೆಯಲ್ಲಿಕಾರ್ಯದಕ್ಷತೆ ಹೆಚ್ಚಿಸುವ ದಿಸೆಯಲ್ಲಿರಾಜ್ಯ ಸರಕಾರವು ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಸುಮಾರು 5 ಲಕ್ಷ ನೌಕರರು ಕಡ್ಡಾಯವಾಗಿ ಇದನ್ನುಪಾಲಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹೊಸ ವ್ಯವಸ್ಥೆ ಜಾರಿಗೆ ಬಂದರೆ ಸರಕಾರಿ ನೌಕರರ ವಿಳಂಬವಾಗಿ ಕಚೇರಿಗೆ ಬರುವುದು, ಕೆಲಸದ ಮಧ್ಯೆ ಎದ್ದು ಹೋಗುವುದು ಸೇರಿ ಹಲವು ಲೋಪಗಳಿಗೆ ಕಡಿವಾಣ ಬೀಳಲಿದೆ ಎಂದು ತಿಳಿದುಬಂದಿದೆ. ಜಿಪಿಎಸ್ ಆಧಾರಿತ, ರಿಯಲ್ ಟೈಮ್ ಡೇಟಾ ಒದಗಿಸುವ ಕೆಎಎಂಎಸ್ ವ್ಯವಸ್ಥೆಯು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬದಲಿಸಲಿದೆ.
ರಾಜ್ಯ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆಗಳ ಇಲಾಖೆಯು (ಇ-ಗವರ್ನನ್ಸ್) ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ (ಕೆಎಎಂಎಸ್)ಯನ್ನು ಅಭಿವೃದ್ಧಿಪಡಿಸಿದೆ. ಇದನ್ನು ರಾಜ್ಯಾದ್ಯಂತ ಎಲ್ಲಸರಕಾರಿ ಕಚೇರಿಗಳಲ್ಲಿಅಳವಡಿಸಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ಜಾರಿಗೆ ತರಲು ಚಿಂತನೆ ನಡೆದಿದೆ. ಇದರಿಂದಾಗಿ ಸರ್ಕಾರಿ ನೌಕರರ ಕಾರ್ಯದಕ್ಷತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.