ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಖಾಲಿ ಇರುವ ಸಾವಿರಾರು ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ಆಗುತ್ತಿಲ್ಲ. ಸರ್ಕಾರಿ ಶಾಲೆಗಳು ಬೀಳುವ ಹಂತ ತಲುಪಿವೆ. ಮಕ್ಕಳ ದಾಖಲಾತಿಯೂ ಕಡಿಮೆಯಾಗಿದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಿಗೆ 22.47 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಹೌದು, ರಾಜ್ಯದ 41,392 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2024-25ನೇ ಸಾಲಿಗೆ ಸಂಬಂಧಿಸಿದಂತೆ ಎರಡನೇ ಕಂತಿನಲ್ಲಿ22.47 ಕೋಟಿ ರೂ. ಶಾಲಾನುದಾನ ಬಿಡುಗಡೆ ಮಾಡಿ ಸಮಗ್ರ ಶಿಕ್ಷ ಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಅನುಕೂಲವಾಗಲಿದೆ. ಈ ಅನುದಾನವನ್ನು ಪ್ರತಿ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿರುವ ಮೊತ್ತವನ್ನು ಬಿಡುಗಡೆ ಮಾಡಲು ಎಲ್ಲಾ ಜಿಲ್ಲಾಉಪನಿರ್ದೇಶಕರಿಗೆ ಸೂಚಿಸಲಾಗಿದೆ.
1ರಿಂದ 30 ಮಕ್ಕಳಿರುವ ಶಾಲೆಗಳಿಗೆ ತಲಾ 2 ಸಾವಿರ ರೂ., 31ರಿಂದ 100 ಮಕ್ಕಳಿರುವ ಶಾಲೆಗಳಿಗೆ 5000 ರೂ., 101ರಿಂದ 250 ಮಕ್ಕಳಿದ್ದರೆ 10,000 ರೂ., 251ರಿಂದ 1000 ಮಕ್ಕಳಿರುವ ಶಾಲೆಗಳಿಗೆ 15 ಸಾವಿರ ರೂ. ಮತ್ತು 1000ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ 20 ಸಾವಿರ ರೂ. ನೀಡಲು ಸೂಚಿಸಲಾಗಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಪ್ರಸಕ್ತ ಸಾಲಿನಲ್ಲಿಒಟ್ಟು 114.59 ಕೋಟಿ ರೂ. ಶಾಲಾನುದಾನ ಅನುಮೋದನೆಗೊಂಡಿದೆ. ಈ ಪೈಕಿ ಮೊದಲ ಕಂತಿನಲ್ಲಿ22.67 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿತ್ತು. ಈಗ ಶೂನ್ಯ ದಾಖಲಾತಿ ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆಗಳಿಗೆ ಎರಡನೇ ಕಂತಿನಲ್ಲಿಒಟ್ಟು 22.47 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನದಲ್ಲಿಶೇ.10ರಷ್ಟನ್ನು ಕಡ್ಡಾಯವಾಗಿ ಶಾಲಾ ಸ್ವಚ್ಛತೆಗೆ ಬಳಸಲು ನಿರ್ದೇಶಿಸಲಾಗಿದೆ.