ಬೆಂಗಳೂರು: ಕೊನೆಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪೋಷ್ ಕಮಿಟಿ ರಚನೆ ಮಾಡಿದೆ.
ಈ ಹಿಂದೆ ಸಿನಿಮಾ ರಂಗದಲ್ಲಿ ಹಲವಾರು ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿದ್ದವು. ಈ ವೇಳೆ ಮಧ್ಯಸ್ಥಿಕೆ ವಹಿಸಿದ್ದ ಮಹಿಳಾ ಆಯೋಗವು ಪೋಷ್ ಕಮಿಟಿ(Women’s Commission is a posh committee) ರಚನೆಗೆ ಆದೇಶಿಸಿತ್ತು.
ಪರ ವಿರೋಧಗಳ ನಡುವೆಯೂ ಈಗ ಪೋಷ್ ಕಮಿಟಿ ರಚನೆಯಾಗಿದೆ. ಒಟ್ಟು ಏಳು ಸದಸ್ಯರನ್ನೊಳಗೊಂಡ ಪೋಷ್ ಕಮಿಟಿ ರಚಿಸಲಾಗಿದೆ. ಎಂ.ನರಸಿಂಹಲು(M. Narasimhalu) ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಲಾಗಿದೆ ಎನ್ನಲಾಗಿದೆ.