ಅತ್ಯಾಧುನಿಕ ನಗರ ಯೋಜನೆಗಳು, ಬೃಹತ್ ಮೂಲಸೌಕರ್ಯ ಯೋಜನೆಗಗಳು, ಸ್ವಚ್ಛ ಬೆಂಗಳೂರು, ಸುಧಾರಿತ ಮತ್ತು ಸುಸ್ಥಿರ ನಗರವನ್ನಾಗಿಸುವುದು ಬಜಟ್ ಗುರಿಯಾಗಿದೆ. ‘ಬ್ರಾಂಡ್ ಬೆಂಗಳೂರು’ ಯೋಜನೆ ಮತ್ತು ಸ್ಮಾರ್ಟ್ ನಗರ ಪ್ರಯಾಣ ಪರಿಕಲ್ಪನೆಗಳು ಬಜೆಟ್ನಲ್ಲಿ ಗಮನ ಸೆಳೆದಿವೆ.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 2025-26ರ ಸಾಲಿನ ರಾಜ್ಯ ಆಯವ್ಯಯದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. . ಮೂಲಸೌಕರ್ಯ, ನಗರ ಸಾರಿಗೆ, ಕುಡಿಯುವ ನೀರಿನ ಪೂರೈಕೆ, ತ್ಯಾಜ್ಯ ನಿರ್ವಹಣೆ ಮತ್ತು ಪ್ರವಾಹ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಬ್ರಾಂಡ್ ಬೆಂಗಳೂರು ಯೋಜನೆಯಡಿ ಬೆಂಗಳೂರು ನಗರಕ್ಕೆ ಒಟ್ಟು 7,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದು ಮಹಾನಗರದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜಾಗತಿಕ ಮಟ್ಟದ ಸ್ಪರ್ಧೆಗೆ ಒಡ್ಡಲು ನಿರ್ಧರಿಸಲಾಗಿದೆ.
ಅತ್ಯಾಧುನಿಕ ನಗರ ಯೋಜನೆಗಳು, ಬೃಹತ್ ಮೂಲಸೌಕರ್ಯ ಯೋಜನೆಗಗಳು, ಸ್ವಚ್ಛ ಬೆಂಗಳೂರು, ಸುಧಾರಿತ ಮತ್ತು ಸುಸ್ಥಿರ ನಗರವನ್ನಾಗಿಸುವುದು ಬಜಟ್ ಗುರಿಯಾಗಿದೆ. ‘ಬ್ರಾಂಡ್ ಬೆಂಗಳೂರು’ ಯೋಜನೆ ಮತ್ತು ಸ್ಮಾರ್ಟ್ ನಗರ ಪ್ರಯಾಣ ಪರಿಕಲ್ಪನೆಗಳು ಬಜೆಟ್ನಲ್ಲಿ ಗಮನ ಸೆಳೆದಿವೆ.
ಬೆಂಗಳೂರು ಅಭಿವೃದ್ಧಿಗೆ ಮುಖ್ಯ ಅನುದಾನಗಳು
ಮಹಾನಗರ ಬೆಂಗಳೂರಿನ ರಸ್ತೆ ವಿಸ್ತರಣೆ ಯೋಜನೆಗಳಿಗಾಗಿ 40,000 ಕೋಟಿ ರೂಪಾಯಿ ನೀಡಲಾಗಿದ್ದು. ಇದರಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ ಟನಲ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪರಿಫೆರಲ್ ರಿಂಗ್ ರಸ್ತೆ, ಈಗ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಎಂದು ಮರುನಾಮಕರಳ್ಳಲಿದೆ. ಕೈಗಾರಿಕಾ ಮತ್ತು ವಸತಿ ವಲಯಗಳನ್ನು ಉತ್ತಮವಾಗಿ ಸಂಪರ್ಕಿಸುವ ರಸ್ತೆಗಳಿಗೆ 27,000 ಕೋಟಿ ರೂಪಾಯಿ ನಿಗದಿ ಮೀಸಲಿಡಲಾಗಿದೆ.
ನಮ್ಮ ಮೆಟ್ರೊ ಇನ್ನಷ್ಟು ವಿಸ್ತರಿಸಲು 98.6 ಕಿ.ಮೀ ಹೊಸ ಮಾರ್ಗಗಳ ಪ್ರಸ್ತಾವನೆ ಆಗಿದೆ. ಈ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದೆ. ಉಪನಗರ ರೈಲು ಸೇವೆಯ ಅಭಿವೃದ್ಧಿಗಾಗಿ ₹15,767 ಕೋಟಿ ಅನುದಾನ ಮೀಸಲಾಗಿದ್ದು, ಇದರಿಂದ 148 ಕಿಮೀ ಉದ್ದದ ರೈಲು ಮಾರ್ಗ ಹಾಗೂ 58 ಹೊಸ ನಿಲ್ದಾಣಗಳ ನಿರ್ಮಾಣ ನಡೆಯಲಿದೆ.
ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 1,800 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರಲ್ಲಿ ಸ್ಮಾರ್ಟ್ ಟ್ರಾಫಿಕ್ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ ಸಿಗ್ನಲ್ ವ್ಯವಸ್ಥೆ ಮತ್ತು ಟ್ರಾಫಿಕ್ ನಿರ್ವಹಣಾ ಕ್ರಮಗಳು ಇದರಲ್ಲಿ ಸೇರಿವೆ.
ಬೆಂಗಳೂರಿನ ನೀರಿನ ಸಮಸ್ಯೆ ಸುಧಾರಣೆ
ಬೇಸಿಗೆಯಲ್ಲಿ ನೀರಿನ ಕೊರತೆ ನಿವಾರಿಸಲು ಮತ್ತು ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಪೂರೈಕೆ ಸುಧಾರಿಸಲು 5,550 ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ ಹಂತ-5 ಯೋಜನೆ ಕೈಗೊಳ್ಳಲಾಗಿದೆ. ಮಳೆಗಾಲದಲ್ಲಿ ಪ್ರವಾಹ ನಿಯಂತ್ರಿಸಲು 3,000 ಕೋಟಿ ರೂಪಾಯಿ ಪ್ರಕಟಿಸಲಾಗಿದೆ. ಚರಂಡಿ ನೀರು ಶುದ್ಧೀಕರಣ ಘಟಕಗಳ ನಿರ್ಮಾಣಕ್ಕೆ ಮತ್ತು ಬೆಳ್ಳಂದೂರು ಮತ್ತು ವರ್ಥೂರು ಕೆರೆಗಳ ಪುನಶ್ಚೇತನಕ್ಕಾಗಿ 234 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.
ಜಲಜೋಡಣೆ ಮತ್ತು ಹಸಿರು ಬೆಂಗಳೂರು ಅಭಿಯಾನಗಳ ಅಡಿಯಲ್ಲಿ 35 ಕೋಟಿ ರೂಪಾಯಿಯನ್ನು 14 ಕೆರೆಗಳ ಪುನಶ್ಚೇತನಕ್ಕೆ ಮೀಸಲಿಡಲಾಗಿದೆ. ಮಳೆ ನೀರಿನ ಸಂಗ್ರಹಣಾ ವ್ಯವಸ್ಥೆ ಸುಧಾರಿಸಲು ಹಾಗೂ ಪರಿಸರ ಸಮತೋಲನ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನ ಆರೋಗ್ಯ ಸೇವೆ
ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸಲು 413 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು, ಇದರಡಿ ಸಮಗ್ರ ಆರೋಗ್ಯ ಕಾರ್ಯಕ್ರಮಗಳ ಜಾರಿಗೆ ಒತ್ತು ನೀಡಲಾಗಿದೆ. ನಗರದ ತ್ಯಾಜ್ಯ ನಿರ್ವಹಣೆ ಮತ್ತು ಪುನರುಪಯೋಗ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಕಾರ್ಬನ್ ಕ್ರೆಡಿಟ್ ಪಡೆಯುವ ಪ್ರಯತ್ನವೂ ನಡೆಯಲಿದೆ. ಎಸ್ಟಿಪಿ ಘಟಕಗಳಲ್ಲಿ ಬಯೋ-ಗ್ಯಾಸ್ ಉತ್ಪಾದನೆ ಮಾಡುವ ಯೋಜನೆಯೂ ಪ್ರಕಟಿಸಲಾಗಿದೆ.
ತೆರಿಗೆ ಸುಧಾರಣೆ
ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆ ಸುಧಾರಿಸಲು ಬಿಬಿಎಂಪಿ ಆನ್‌ಲೈನ್ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಸ್ತಿ ನಿರ್ವಹಣಾ ನಿಯಮಗಳನ್ನು ಸುಧಾರಿಸಲಾಗಿದೆ. ಬೆಂಗಳೂರು ಜಾಹೀರಾತು ನಿಯಮಾವಳಿ 2025ಅನ್ವಯ, 750 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡಿರುವ ಈ ಬೃಹತ್ ಹೂಡಿಕೆಗಳು ನಗರವನ್ನು ಒಗ್ಗೂಡಿಸುವ ಉದ್ದೇಶವನ್ನು ಹೊಂದಿದ್ದು, ನಗರೀಕರಣದ ಸುಧಾರಿತ ಮಾದರಿಯಾಗಿ ರೂಪುಗೊಳ್ಳಲು ನೆರವಾಗಲಿವೆ.