ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಮುಖ್ಯ ರಸ್ತೆಯಲ್ಲಿ ಇಂದು (ಮಂಗಳವಾರ) ನಸುಕಿನ ವೇಳೆ ವ್ಯಕ್ತಿಯೊಬ್ಬರನ್ನು ಇರಿದು ಕೊಲೆ ಮಾಡಲಾಗಿದೆ.
ನವೀನ ಪೂಜಾರಿ (50) ಕೊಲೆಯಾದವರು. ಮಂಗಳೂರಿನ ಪಡೀಲ್ ನಿವಾಸಿಯಾದ ನವೀನ್ ಪೂಜಾರಿ, ಈ ಹಿಂದೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಇವರು ಕುಂಟಲ್ಪಾಡಿ ಬಳಿಯ ಅಪಾರ್ಟೆಂಟ್‌ನಲ್ಲಿ ವಾಸವಾಗಿದ್ದರು.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎಎಸ್‌ಪಿ ಹರ್ಷ ಪ್ರಿಯಂವದ, ನಗರ ಠಾಣಾ ಎಸ್‌ಐ ಮುರಳೀಧರ ನಾಯಕ, ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಪ್ರಸನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















