ಬೆಂಗಳೂರು | ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಅಂದ್ರೆ ಕ್ರೇಜ್ ಜಾಸ್ತಿಯೇ ಇರುತ್ತದೆ. ಅದರಲ್ಲೂ ಫಸ್ಟ್ ಡೇ ಫಸ್ಟ್ ಶೋ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇತ್ತೀಚಿಗೆ ರಿಲೀಸ್ ಆದ ಡೆವಿಲ್ ಸಿನಿಮಾಗೂ ಅದೇ ರೀತಿ ಕ್ರೇಜ್ ಇತ್ತು. ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಫೆಬ್ರವರಿ 16ರಂದು ದರ್ಶನ್ 49ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ದಾಸನ ಅಭಿಮಾನಿಗಳಿಗೆ ದಾಸನ ದರ್ಶನ ಆಗಲ್ಲ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದಾಸನಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಈ ಮಧ್ಯೆ ದಾಸನನ್ನು ನೋಡಲು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಹೌದು.. ದರ್ಶನ್ ವೃತ್ತಿ ಜೀವನದಲ್ಲಿ ಮಹತ್ವದ ಚಿತ್ರ ಆಗಿರುವ ಕರಿಯ ಸಿನಿಮಾ ರೀ ರಿಲೀಸ್ ಆಗ್ತಿದೆ. ಪ್ರೇಮ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾದ ಈ ಚಿತ್ರವನ್ನು ದರ್ಶನ್ ಅವರ ಹುಟ್ಟುಹಬ್ಬದಂದು ಮತ್ತೆ ಚಿತ್ರಮಂದಿರಗಳಿಗೆ ತರಲಾಗುತ್ತಿದೆ.
ಈ ಹಿಂದೆ ಕರಿಯ ಸಿನಿಮಾದಲ್ಲಿ ರಿಯಲ್ ರೌಡಿಂಗ್‌ಗಳನ್ನೇ ಜೋಗಿ ಪ್ರೇಮ್ ಬಳಕೆ ಮಾಡಿದ್ದರು. 2003 ಜನವರಿ-3ರಂದು ಕರಿಯ ಸಿನಿಮಾ ರಿಲೀಸ್ ಆಗಿತ್ತು. ಆ ಕಾಲದಲ್ಲಿ ಸುಮಾರು 700 ಹೆಚ್ಚು ಶೋಗಳು ಪ್ರದರ್ಶನ ಕಂಡಿದ್ದವು. ಇದೀಗ ಮತ್ತೆ ನಾಳೆ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ ತನಿಶಾ ಕುಪ್ಪಂಡ ಅವರು ಕರಿಯ ಸಿನಿಮಾವನ್ನು ರೀ-ರಿಲೀಸ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಈ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಇನ್ನು ಕರಿಯ ಸಿನಿಮಾ ಅಂಡರ್‌ವರ್ಲ್ಡ್ ಕಥೆಯ ಜೊತೆಗೆ ಅದ್ಭುತ ಪ್ರೇಮಕಥೆಯನ್ನು ಹೊಂದಿತ್ತು. ವಿಶೇಷವಾಗಿ ಗುರುಕಿರಣ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಇಂದಿಗೂ ಎವರ್‌ಗ್ರೀನ್. ಅದರಲ್ಲೂ ಕೆಂಚಾಲೋ ಮಚಾಲೋ ಸಾಂಗ್ ಇಂದಿಗೂ ಸಭೆ, ಸಮಾರಂಭಗಳಲ್ಲಿ ಪ್ಲೇ ಆಗುವ ಎವರ್ ಗ್ರೀನ್ ಸಾಂಗ್ ಅಂತಾನೆ ಹೇಳಬಹುದು. ಇಂತಹ ಸೂಪರ್ ಹಿಟ್ ಸಿನಿಮಾವನ್ನು ಮತ್ತೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ : ಬಿಕ್ಲು ಶಿವ ಕೊ*ಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜ್ ಬಂಧನ | ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆದ ಸಿಐಡಿ ಟೀಂ!



















