ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅ. 2 ರಂದು ದೇಶದ್ಯಂತ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ರಿಷಬ್ ಶೆಟ್ಟಿಯ ನಟನೆ ಮತ್ತು ನಿರ್ದೇಶನಕ್ಕೆ ಪ್ರಶಂಶಿಸಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಕಲೆಕ್ಷನ್ ಮಾಡುತ್ತಿದೆ.

ಭಾರತದಲ್ಲಿ ಒಟ್ಟು 6,500 ಸ್ಟೀನ್ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ವಾಗಿದೆ.ಎಲ್ಲಾ ಭಾಷೆ ಸೇರಿ ಭಾರತದಲ್ಲಿ ಒಟ್ಟು ಅಂದಾಜು 45 ಕೋಟಿ ರೂ.ಗಳಷ್ಟು ಕಲೆಕ್ಷನ್ ಆಗಿದೆ. ಅ.1ರಂದು ದೇಶದ ವಿವಿಧೆಡೆ ಪ್ರೀಮಿಯರ್ ಶೋ ನಡೆದಿದ್ದು, ಶೋ ಎಲ್ಲವೂ ಹೌಸ್ಫುಲ್ ಆಗಿದೆ. ಇದರಿಂದ ಸಿನಿಮಾಗೆ ರೆಸ್ಪಾನ್ಸ್ ಸಿಕ್ಕಿದ್ದು, ಬಿಡುಗಡೆ ದಿನ ಉತ್ತಮ ಪ್ರದರ್ಶನ ಕಂಡಿದೆ. ಇನ್ನೂ ಅ.3 ರಾತ್ರಿ ಹೊತ್ತಿಗೆ ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಆಗುವ ನಿರೀಕ್ಷೆಯಿದೆ.
ಇನ್ನೂ ಅಮೇರಿಕಾದಲ್ಲಿ ಅಂದಾಜು 4.20 ಕೋಟಿ ರೂ. ಗಳಿಕೆಯಾಗಿದೆ. ಒಟ್ಟು 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, 10 ಕೋಟಿ ರೂ.ವರೆಗೂ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 10 ಲಕ್ಷಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗಿದೆ. ಅ.2ರಂದು ಪ್ರತಿ ಗಂಟೆಗೆ 60,000 ಟಿಕೆಟ್ ಸೋಲ್ಡ್ ಔಟ್ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಒಂದು ಟಿಕೆಟ್ ದರ 2,400 ರೂ.ಗೆ ಮಾರಾಟವಾಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ 1,200 ರೂ. ಇತ್ತು. ಚೆನ್ನೈ, ಕೊಚ್ಚಿ, ಮುಂಬೈ ಸೇರಿ ಮಹಾನಗರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಉತ್ತರ ಭಾರತ ಒಂದರಲ್ಲೇ ಈ ಚಿತ್ರ ಅಂದಾಜು 8 ರಿಂದ 10 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಉಳಿದಂತೆ ಕರ್ನಾಟಕದಲ್ಲಿ ಅಂದಾಜು 20 ಕೋಟಿ ರೂ., ಆಂಧ್ರದಲ್ಲಿ ಅಂದಾಜು 5.3 ಕೋಟಿ ರೂ., ತಮಿಳುನಾಡಿನಲ್ಲಿ 3 ಕೋಟಿ ರೂ., ಮಲಯಾಳಂನಲ್ಲಿ ಸುಮಾರು 65 ಲಕ್ಷ ರೂ.ಗಳಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ.



















