ಹಾವೇರಿ: ಬ್ಯಾಂಕಾಕ್ ನಲ್ಲಿ ಸಂಭವಿಸಿರುವ ಭೂಕಂಪನ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಹಾವೇರಿ ಜಿಲ್ಲೆಯ ಐವರು ಕನ್ನಡಿಗರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಈಗ ವಿಡಿಯೋ ಮಾಡಿದ ಕನ್ನಡಿಗರು ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ.
ಕನ್ನಡಿಗ ಪ್ರವಾಸಿಗರು ತಂಗಿದ್ದ 5 ಕಿಮೀ ದೂರದಲ್ಲೇ ಭೂಕಂಪ ಸಂಭವಿಸಿದೆ. ಅವರಿಗೆ ಭೂಕಂಪ ಸಂಭವಿಸುತ್ತಿದ್ದಂತೆ ಸಮುದ್ರದ ನೀರಿನ ಅಲೆ ಬಂದತ್ತೆ ಭಾಸವಾದ ಅನುಭವವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇಂದೇ ಮರಳಿ ಕರುನಾಡಿಗೆ ವಾಪಸ್ಸಾಗುತ್ತಿದ್ದಾರೆ.
ಒಟ್ಟು 22 ಜನರ ತಂಡದೊಂದಿಗೆ ಐವರು ಕನ್ನಡಗಿರು ತೆರಳಿದ್ದರು. ಸದ್ಯ ಬ್ಯಾಂಕಾಕ್ ಏರ್ ಪೋರ್ಟ್ ನಲ್ಲಿ 22 ಜನ ಸುರಕ್ಷಿತರಾಗಿದ್ದಾರೆ. ಈಗ ತಾವು ಸೇಫ್ ಆಗಿರುವ ವಿಡಿಯೋ ಹಂಚಿಕೊಂಡಿದ್ದಾರೆ.