ಮಂಡ್ಯ: ಯಾರಿಗೆ ಯಾವ ರೀತಿ ಅದೃಷ್ಟ ಒಲಿಯುತ್ತದೆ ಎಂಬುವುದು ತಿಳಿಯುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ, ಬರೋಬ್ಬರಿ 25 ಕೋಟಿ ರೂ. ಲಾಟರಿ ಹೊಡೆದಿದೆ.
ಮಂಡ್ಯ ಮೂಲದ ಮೆಕಾನಿಕ್ ಗೆ ಲಾಟರಿ ಒಲಿದಿದೆ. ಮಂಡ್ಯದ (Mandya) ಅಲ್ತಾಫ್ ಪಾಷಾ ಎಂಬ ವ್ಯಕ್ತಿ ಲಾಟರಿಯಲ್ಲಿ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ (Wayanad) ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾಗ ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ (Thiruvonam Bumper Lottery) ಟಿಕೆಟ್ ಖರೀದಿಸಿದ್ದರು.
ಆದರೆ, ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ಗೆದ್ದಿದ್ದಾರೆ. ತಾನು ಖರೀದಿ ಮಾಡಿದ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಹಣ ತರಲು ಕೇರಳಕ್ಕೆ ಹೋಗಿದ್ದಾರೆ. ಬುಧವಾರದಂದು ತಿರುವೋಣಂ ಬಂಪರ್ ಡ್ರಾ ನಡೆಯಿತು. 360 ಕೋಟಿ ಮೌಲ್ಯದ 71 ಲಕ್ಷ ಟಿಕೆಟ್ ಗಳು ಮಾರಾಟವಾಗಿದ್ದವು. ಹಾಗಾಗಿ ವಿವಿಧ ಹಂತದ ಬಹುಮಾನಕ್ಕೆ 50 ಕೋಟಿ ರೂ. ನಿಗದಿಪಡಿಸಲಾಗಿತ್ತು. ಓಣಂ ಬಂಪರ್ ನಲ್ಲಿ 25 ಕೋಟಿ ರೂ. ಮೊದಲ ಬಹುಮಾನ ಗೆದ್ದ ಅದೃಷ್ಟವಂತ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಅಲ್ತಾಫ್ ಎಂಬುವುದು ಈಗ ಬಹಿರಂಗವಾಗಿದೆ.