ರಾಜ್ಯಕ್ಕೆ ಆಗಮಿಸಿರುವ ನಟಿ, ಸಂಸದೆ ನಟಿ ಕಂಗನಾ ರಣವಾತ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾವಿದರೊಂದಿಗೆ ಯಾವಾಗಲೂ ದೇವರು ಇರುತ್ತಾನೆ. ಅವರ ನಟ್ಟು ಟೈಟ್ ಮಾಡಲು ಬಂದರೆ ಕಾಪಾಡಲು ದೇವರು ಬರುತ್ತಾನೆ’ ಎಂದು ತಿರುಗೇಟು ನೀಡಿದ್ದಾರೆ.
ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ನಟ್ಟು, ಬೋಲ್ಟ್ ಟೈಟ್ ಮಾಡುವುದಾಗಿ ಡಿಕೆಶಿ ಹೇಳಿದ್ದರು. ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಆ ಮಾತಿಗೆ ಕಂಗನಾ ಕೂಡ ತಿರುಗೇಟು ನೀಡಿದ್ದಾರೆ.