ಹಿಂದೆ ದಿಲ್ಲಿಯ ರೈತ ಚಳವಳಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯ ಮುಜುಗರಕ್ಕೆ ಕಾರಣವಾಗಿದ್ದರು. ಈಗ ಬಿಜೆಪಿ ಸರ್ಕಾರವು 2020ರಲ್ಲಿ ನಡೆದ ರೈತ ಚಳಿವಳಿ ಬಳಿಕ ಹಿಂಪಡೆದುಕೊಂಡ 3 ರೈತ ಕಾನೂನುಗಳನ್ನು ಮರಳಿ ಅನುಷ್ಠಾನಗೊಳಿಸುವಂತೆ ರೈತರೇ ಒತ್ತಾಯಿಸಬೇಕು ಎಂದು ಹೇಳಿದ್ದು, ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಂಗಳವಾರ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರವ್ಯಾಪಿ ರೈತ ಚಳವಳಿ ನಡೆದ ನಂತರ ನವೆಂಬರ್ 2021 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಹಿಂತೆಗೆದುಕೊಂಡ ಮೂರು ಕಾನೂನುಗಳನ್ನು ಮರಳಿ ತರಬೇಕು ಮತ್ತು ರೈತರೇ ಅದಕ್ಕಾಗಿ ಒತ್ತಾಯಿಸಬೇಕು ಎಂದು ಹೇಳಿದ್ದಾರೆ.
ಇದು ವಿವಾದ ಆಗುತ್ತದೆ ಎಂಬುವುದು ನನಗೆ ಗೊತ್ತು. ಆದರೆ ರೈತ ಕಾನೂನುಗಳು ಮರಳಿ ಅನುಷ್ಠಾನಗೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ರೈತರು ಅವರಾಗಿಯೇ ಬೇಡಿಕೆ ಇಡಬೇಕು. ಈ ಕಾನೂನುಗಳು ದೇಶದ ಅಭಿವೃದ್ಧಿಯಲ್ಲಿ ಭದ್ರ ಬುನಾದಿಯಾಗಿ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ರೈತರು ತಮ್ಮ ಒಳಿತಿಗಾಗಿ ಈ ಕಾನೂನುಗಳ ಮರುಜಾರಿಗೆ ಆಗ್ರಹಿಸಬೇಕು ಎಂದು ಹೇಳಿದ್ದಾರೆ.
ಕಂಗನಾ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮೋದಿ ಮತ್ತು ಅವರ ತಂಡ ಎಷ್ಟೇ ಪ್ರಯತ್ನಿಸಿದರೂ ಈ ಕರಾಳ ಕಾನೂನನ್ನು ಮತ್ತೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.