ನವದೆಹಲಿ: ದೆಹಲಿ ಚುನಾವಣೆ ಬುಧವಾರ ಮುಕ್ತಾಯವಾಗಿದ್ದು, ಎಕ್ಸಿಟ್ ಪೋಲ್ (Delhi Exit Poll)ಹೊರ ಬೀಳುತ್ತಿವೆ. ಟುಡೇಸ್ ಚಾಣಕ್ಯ (Today’s Chanakya) ಈಗ ತನ್ನ ಭವಿಷ್ಯವನ್ನು ಹೇಳಿದ್ದು, ಬಿಜೆಪಿ (BJP)ಗೆ ಮತದಾರ ಜೈ ಅಂದಿದ್ದಾನೆ ಎಂದು ಹೇಳಿದೆ.
ದೆಹಲಿಯಲ್ಲಿ ಬಿಜೆಪಿ 50+ ಸ್ಥಾನ ಗೆಲ್ಲಬಹುದು ಎಂದು ಟುಡೇಜ್ ಚಾಣಕ್ಯ ಭವಿಷ್ಯ ನುಡಿದಿದೆ. ಈ ಬಾರಿ ಬಿಜೆಪಿ ಮೈತ್ರಿಕೂಟ 51 ± 6, ಆಪ್ 19 ± 6, ಇತರರು 0 ± 3 ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ. ಬಿಜೆಪಿ ಶೇ. 49, ಆಪ್ ಶೇ.41, ಇತರರು ಶೇ. 10ರಷ್ಟು ಮತ ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.
ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ಇಲ್ಲಿಯವರೆಗೆ ಪ್ರಕಟವಾದ 12 ಸಮೀಕ್ಷೆಗಳಲ್ಲಿ 10 ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರೆ 2 ಸಮೀಕ್ಷೆಗಳು ಮಾತ್ರ ಆಪ್ ನತ್ತ ಬೊಟ್ಟು ಮಾಡಿವೆ.
70 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದೆಹಲಿ ಫಲಿತಾಂಶ ಫೆ. 8 ರಂದು ಹೊರ ಬೀಳಲಿದೆ. ದೆಹಲಿ ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ.
25 ವರ್ಷಗಳ ನಂತರ ಅಧಿಕಾರವನ್ನು ಮರಳಿ ಪಡೆಯಲು ಬಿಜೆಪಿ ಉತ್ಸುಕತೆ ತೋರುತ್ತಿದೆ. ದಶಕದ ಅಧಿಕಾರವನ್ನು ಮತ್ತೆ ಮುಂದುವರೆಸಲು ಆಪ್ ಯತ್ನಿಸುತ್ತಿದೆ. ಕೆಲವು ಕ್ಷೇತ್ರಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಆದರೆ, ಮತದಾರ ಮಾತ್ರ ಯಾರಿಗೆ ಜೈ ಅಂದಿದ್ದಾನೆ ಎಂಬುವುದನ್ನು ಕಾಯ್ದು ನೋಡಬೇಕಿದೆ.