ಕಮಲ್ ಹಾಸನ್ ನಟಿಸಿ ಮಣಿರತ್ನಂ ನಿರ್ದೇಶಿಸಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಜೂನ್ 5ರಂದು ಮಣಿರತ್ಮಂ-ಕಮಲ್ ಕಾಂಬಿನೇಶನ್ ನ ಮೆಗಾ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ. ಇದರ ನಡುವೆಯೇ ಸಿನಿಮಾದ ಒಟಿಟಿ ರೈಟ್ಸ್ ಕೂಡ ಬಿಡುಗಡೆಗೂ ಮುನ್ನವೇ ಐತಿಹಾಸಿಕ ಮೊತ್ತಕ್ಕೆ ಡೀಲ್ ಆಗಿದೆ.
ಥಗ್ ಲೈಫ್ ಸಿನಿಮಾ ನೆಟ್ ಪ್ಲಿಕ್ಸ್ ನಲ್ಲಿ ಪ್ರಸಾರಗೊಳ್ಳಲಿದೆ. 149 ಕೋಟಿ ರೂ. ದಾಖಲೆಯ ಮೊತ್ತಕ್ಕೆ ಚಿತ್ರದ ಒಟಿಟಿ ರೈಟ್ಸ್ ಮಾರಾಟವಾಗಿದ್ದು, ತಮಿಳು, ತೆಲುಗು, ಮಳಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಚಿತ್ರಮಂದಿರದಲ್ಲಿ ತೆರೆ ಕಂಡ 5 ವಾರಗಳ ಬಳಿಕ ಒಟಿಟಿ ರಿಲೀಸ್ ಗೆ ಚಿತ್ರತಂಡ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಕಮಲ್ ಗೆ ಈ ಚಿತ್ರದಲ್ಲಿ ತ್ರಿಶಾ ಜೊತೆಯಾಗಿದ್ದು, ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಇನ್ನು ತಮಿಳಿನ ಸೂರ್ಯ ನಟನೆಯ ಕಂಗುವಾ 100 ಕೋಟಿ, ಅಜಿತ್ ನಟನೆಯ ಗುಡ್ ಬ್ಯಾಡ್ ಅಗ್ಲಿ 95 ಕೋಟಿ ರೂ. ಹಾಗೂ ವಿಜಯ್ ಅಭಿನಯದ ಗೋಟ್ ಸಿನಿಮಾ 110 ಕೋಟಿ ರೂ.ಗೆ ಒಟಿಟಿ ರೈಟ್ಸ್ ಮಾರಾಟ ಮಾಡಿದ್ದವು. ಆದರೆ, ಈಗ ಆ ಎಲ್ಲ ದಾಖಲೆಗಳನ್ನು ಥಗ್ ಲೈಫ್ ಅಳಿಸಿ ಹಾಕಿದೆ.