ಬೆಂಗಳೂರು : ಜಾತಿಗಣತಿಗೆ ಮನೆ ಗೇಟಿನ ಮುಂದೆ ನಿಂತು ಟೀಚರಮ್ಮ ವಿಚಾರಿಸುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು ಚೈನ್ ಎಗರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಬ್ಯಾಡರಹಳ್ಳಿಯ ಭರತ್ ನಗರದಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು ಹೆಲ್ಮೆಟ್ ಧರಿಸಿ ಅದೇ ದಾರಿಯಲ್ಲಿ ನಿಂತಿದ್ದು, ಶಿಕ್ಷಕಿ ಗೇಟ್ ಬಳಿಯಲ್ಲಿ ನಿಂತು ಮಾತನಾಡುವುದನ್ನು ಗಮನಿಸುತ್ತಿದ್ದರು. ಈ ವೇಳೆ ಹಿಂಬದಿಯಲ್ಲಿ ಕುಳಿತ್ತಿದ್ದ ಕದೀಮಾ ಮೆಲ್ಲಗೆ ಇಳಿದು ಬಂದು ಕ್ಷಣಾರ್ದದ್ದಲ್ಲೇ ಟೀಚರಮ್ಮನ ಸರ ಕಿತ್ತು ಎಸ್ಕೇಪ್ ಆಗಿದ್ದಾರೆ.
ಬ್ಯಾಡರಹಳ್ಳಿಯ ಭರತ್ ನಗರದಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಈ ಕೃತ್ಯಕ್ಕೂ ಮುನ್ನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ಸರ ಎಗರಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಮಹಿಳಾ ವಿಶ್ವಕಪ್ ಫೈನಲ್ಗೇರಿದ ಭಾರತ | ಸೃಷ್ಟಿಯಾದ ದಾಖಲೆಗಳೆಷ್ಟು ಗೊತ್ತೇ?



















