ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್ ಹಾಗೂ ಮುಖಂಡರು ಸ್ವಾಮೀಜಿಗೆ ಸಾಥ್ ನೀಡಿದರು. ಆನಂತರ ಕನ್ಹೇರಿ ಸ್ವಾಮೀಜಿ ಹಾಗೂ ಇನ್ನಿತರ ಸ್ವಾಮೀಜಿಗಳು ಕ್ರಾಂತಿವೀರ ಬ್ರಿಗೇಡ್ ಲಾಂಛನ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಬ್ರಿಗೇಡ್ ಗೀತೆ ಹಾಗೂ ಬ್ರಿಗೇಡ್ ಗೀತೆಯ ಸಿಡಿ ಅನಾವರಣವಾಯಿತು. ನಂತರ ದೀಪ ಬೆಳಗಿಸಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಲಾಯಿತು.