ತುಮಕೂರು : ಕೆ.ಎನ್.ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನೆಲೆ, ಮಧುಗಿರಿಯಲ್ಲಿಂದು ಕಾಂಗ್ರೆಸ್ ಮುಖಂಡರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಪಟ್ಟಣದ ಎಂ.ಎನ್.ಕೆ ಕಲ್ಯಾಣ ಮಂಟಪದಲ್ಲಿ ಪುರಸಭೆಯ ಎಲ್ಲಾ 15 ಕಾಂಗ್ರೆಸ್ ಸದಸ್ಯರು, ಮೂವರು ಪಕ್ಷೇತರ ಸದಸ್ಯರಿಂದ ಸಭೆ ನಡೆಸಲಾಗುತ್ತಿದೆ.
ನಾಳೆ ಮಧುಗಿರಿ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ವಿಚಾರವಾಗಿ ಕೆ.ಎನ್.ಆರ್ ಮತ್ತು ಆರ್ .ಆರ್ ಅಭಿಮಾನಿಗಳ ಬಳಗದ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಮಧುಗಿರಿ ತಾಲ್ಲೂಕಿನ ಎಲ್ಲಾ ಮುಖಂಡರು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.



















