ಬೀದರ್ : ಮನೆಯಲ್ಲಿ ಬಸವಣ್ಣನವರ ಭಾವಚಿತ್ರ ಬಿಟ್ಟು ಇನ್ನುಳಿದ ಭಾವಚಿತ್ರ ಇಡದಂತೆ ಸಾಣೇಹಳ್ಳಿ ಶ್ರೀಗಳು ಕರೆ ನೀಡಿದ್ದಾರೆ.
ಬೀದರ್‌ನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಎಲ್ಲಾ ಮೌಢ್ಯತೆ ನಿರಾಕರಿಸಿ ಬಸವತತ್ವದಂತೆ ಬದುಕುತ್ತೇನೆ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಬಸವತತ್ವವೇ ಶ್ರೇಷ್ಠ ಎಂದಿದ್ದಾರೆ.
ನಿಮ್ಮೆಲ್ಲರ ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರ ಹೊರತಾಗಿ ಬೇರೆ ಯಾವ ಭಾವಚಿತ್ರವನ್ನೂ ಇಟ್ಟುಕೊಳ್ಳಬೇಕಾಗಿಲ್ಲ. ನಿಮ್ಮ ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡಬೇಕು, ಬೇರೆ ಏನನ್ನೂ ಪೂಜೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ದೇವರ ಗೂಡುಗಳನ್ನು ನೋಡಿದರೆ, ಅದೊಂದು ಮ್ಯೂಸಿಯಂ ಆಗಿರುತ್ತದೆ. ಆ ಮ್ಯೂಸಿಯಂ ತೆಗೆದು ಹಾಕಿ ಬಸವಣ್ಣ ನಮ್ಮ ಧರ್ಮ ಗುರು ಎಂದು ಭಾವಿಸಬೇಕು. ಅಂಗೈಯಲ್ಲಿ ಲಿಂಗವನ್ನು ಹಿಡಿದು ಪೂಜೆ ಮಾಡಿದರೆ ಲಿಂಗಾಯತ ಧರ್ಮ ಖಂಡಿತ ಸ್ವತಂತ್ರ ಧರ್ಮವಾಗುತ್ತದೆ ಎಂದು ಲಿಂಗಾಯತರಿಗೆ ಏಕದೇವೋಪಾಸನೆಯ ಪಾಠ ಹೇಳಿದ್ಧಾರೆ.



















